News Karnataka Kannada
Monday, April 15 2024
Cricket
ಮೈಸೂರು

ಏಣಿ ಕಟ್ಟಿ, ಬೈಕ್​ ಮೇಲೆ ಶವ ಸಾಗಿಸಿ ವೃದ್ದನ ಅಂತ್ಯ ಸಂಸ್ಕಾರ

Photo Credit :

ಏಣಿ ಕಟ್ಟಿ, ಬೈಕ್​ ಮೇಲೆ ಶವ ಸಾಗಿಸಿ ವೃದ್ದನ ಅಂತ್ಯ ಸಂಸ್ಕಾರ

ಚಾಮರಾಜನಗರ : ಕೊರೊನಾ ಮಹಾಮಾರಿಯ ಭೀಕರತೆಗೆ ಇಂದು ಜನರು ನಿತ್ಯವೂ ಭಯದ ನೆರಳಿನಲ್ಲೆ ಬದುಕುವಂತಾಗಿದೆ. ನಿತ್ಯವೂ ಪ್ರತೀ ಊರಿನಲ್ಲೂ ಸೋಂಕಿತರು ಮರಣ ಹೊಂದುತಿದ್ದಾರೆ. ಅದರೆ ಈ ನಡುವೆ ಸೋಂಕು ಇಲ್ಲದವರು ಮೃತಪಟ್ಟರೂ ಜನರು ಶವ ಮುಟ್ಟೋದು ಹೋಗಲಿ ನೋಡಲೂ ಹೋಗುತ್ತಿಲ್ಲ.
ಇಂತಹ ಅಮಾನವೀಯ ಘಟನೆಯೊಂದು ಕೊಳ್ಳೇಗಾಲ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಈ ಗ್ರಾಮದ ೭೫ ವರ್ಷ ಪ್ರಾಯದ ವೃದ್ದರೋರ್ವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆದರೆ ಇದನ್ನೂ ಕೊರೋನ ಸಾವು ಎಂದೇ ತೀರ್ಮಾನಿಸಿಕೊಂಡ ಅಕ್ಕ ಪಕ್ಕದವರು ಅವರ ಶವಕ್ಕೆ ಹೆಗಲು ಕೊಡಲು ಮುಂದೆ ಬಂದಿಲ್ಲ. ಇದನ್ನು ಕಂಡ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಸದಸ್ಯರು ವಾಹನ ಅಥವಾ ಆಂಬುಲೆನ್ಸ್‌ ಸಿಗದೇ ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವ ಸಂಸ್ಕಾರ ನೆರವೇರಿಸಿದ್ದಾರೆ. ಪಿಎಫ್ಐ ಯುವಕರ ತಂಡದ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. . ದುರ್ದೈವ ಎಂದರೆ ಮೃತರಾದ ಮಹಾದೇವ ಎಂಬುವವರ ಅಕ್ಕ ಪಕ್ಕ ದ ಮನೆಯವರೂ ಕೊರೊನಾದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಂತ್ಯ ಸಂಸ್ಕಾರಕ್ಕೂ ನೆರವು ನೀಡಲು ನಿರಾಕರಿಸಿದರು. . ಮೃತನ ಅಣ್ಣನ ಮಗ ಗ್ರಾಮದ ಮುಖಂಡನ ಸಹಾಯದಿಂದ ಕೊಳ್ಳೇಗಾಲ ಪಿಎಫ್ಐ ಯುವಕರಿಗೆ ಕರೆ ಮಾಡಿ ಅಂತ್ಯ ಸಂಸ್ಕಾರಕ್ಕೆ ಸಹಕರಿಸುವಂತೆ ಕೇಳಿಕೊಂಡಿದ್ದ. ಕೂಡಲೇ ಸ್ಥಳಕ್ಕೆ 8 ಮಂದಿ ಮುಸ್ಲಿಂ ಯುವಕರ ತಂಡ ದೌಡಾಯಿಸಿ ಸಹಾಯಕ್ಕೆ ಬಂದಿದ್ದಾರೆ. ಪಿಎಫ್ಐ ಸಂಘಟನೆ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಒಂದು ಏಣಿ ಸಹಾಯದಿಂದ ಶವವನ್ನು ಪ್ರಯಾಸಪಟ್ಟು ಕೊಂಡೊಯ್ದಿದ್ದಾರೆ. ಕೊನೆಗೆ ಮಣ್ಣು ಮಾಡಲು ಸ್ಮಶಾನ ತೋರಿಸಿ ಎಂದಾಗಲೂ ಯಾರೊಬ್ಬರು ಸಹ ಮುಂದೆ ಬಾರದೆ ನಮ್ಮ ಊರಿನಲ್ಲಿ ಮಣ್ಣು ಮಾಡಬೇಡಿ ಎಂದು ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಮೃತರ ಜಮೀನಿನಲ್ಲೂ‌ ಮಣ್ಣು‌ ಮಾಡಲು ಅವಕಾಶ ನೀಡದೆ ಸ್ಥಳೀಯರು ಅಮಾನವೀಯತೆ ಪ್ರದರ್ಶಿಸಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಕೊಳ್ಳೇಗಾಲ ಗ್ರಾಮಾಂತರ ಪೋಲೀಸ್‌ ಠಾಣೆಗೆ ಸುದ್ದಿ ಮುಟ್ಟಿಸಲಾಯಿತು. ಆಗ ಪೋಲಿಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿ. ಶವ ಹೂಳಲು ಗೋಮಾಳದಲ್ಲಿ ಜಾಗ‌ ತೋರಿಸಿದ್ದಾರೆ. ನಂತರ ಸಂಘಟನೆಯ ಯುವಕರೇ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಚಿಕ್ಕಪ್ಪನನ್ನು ಕಳೆದುಕೊಂಡ ಯುವಕನು ಅಂತಿಮ ಸಂಸ್ಕಾರವನ್ನು ಮಾಡಲಾಗದೇ ಹುಟ್ಟಿದ ಊರಿನಲ್ಲೇ ಈ ರೀತಿಯ ಪ್ರಯಾಸ ಅನುಭವಿಸಿದ ಸಂಕಷ್ಟ ಯಾರಿಗೂ ಬರಬಾರದು . ಇದೇ ಅಲ್ಲದೆ ನಿತ್ಯವೂ ಪರಸ್ಪರ ಮಾತನಾಡುತಿದ್ದ ಅಕ್ಕ ಪಕ್ಕದ ಮನೆಯವರೂ ಕೂಡ ಅಂತಿಮ ಸಂಸ್ಕಾರಕ್ಕೂ ಕೈ ಜೋಡಿಸದಿರುವುದು ಮಾನವೀಯತೆಯೇ ಸತ್ತು ಹೋಗಿರುವ ಸ್ಪಷ್ಟ ನಿದರ್ಶನವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು