News Karnataka Kannada
Monday, April 22 2024
Cricket
ಮೈಸೂರು

ಉಸ್ತುವಾರಿ ಸಚಿವರಿಗೆ ರೈತರ ಮುತ್ತಿಗೆ ಪ್ರತಿಭಟನೆ

Photo Credit :

ಉಸ್ತುವಾರಿ ಸಚಿವರಿಗೆ ರೈತರ ಮುತ್ತಿಗೆ ಪ್ರತಿಭಟನೆ

ಮೈಸೂರು: ಇಲ್ಲಿನ ಗನ್‌ಹೌಸ್‌ ಹತ್ತಿರ ಕುರುಬೂರು ಶಾಂತಕುಮಾರ್‌ ಅವರ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್‌ ಅವರ ಕಾರು ತಡೆದು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು ಈವರೆಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆಯನ್ನೇ ಕರೆಯದಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ವಿಧಾನ ಸಭೆಯ ಅಧಿವೇಶನ ಶೀಘ್ರದಲ್ಲಿ ಆರಂಬಗೊಳ್ಳಲಿದ್ದು ರೈತರ ಸಮಸ್ಯೆ ಕುರಿತು ಸದನದಲ್ಲಿ ಮಾತಾಡಲು ಮಾಹಿತಿಯೇ ಇಲ್ಲದೆ ಹೇಗೆ ಮಾತಾಡುತ್ತೀರಿ ಎಂದು ಶಾಂತ ಕುಮಾರ್‌ ಪ್ರಶ್ನಿಸಿದರು. ಕೂಡಲೇ ಸಭೆ ಕರೆಯಲು ಆಗ್ರಹಿಸಿದರು. 

ಶಂಕರಪುರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಸಚಿವರು ರೈತರನ್ನು ಸಮಾಧಾನ ಪಡಿಸಿದರು. ಈಗಾಗಲೇ ಸೆ.26ರಂದು ರೈತರ ಜೊತೆ ಸಭೆಯನ್ನು ನಿಗದಿಪಡಿಸಿದ್ದೇನೆ. ಈ ಬಗ್ಗೆ ನಿಮಗೂ ಮಾಹಿತಿ ಕೊಡುತ್ತಿದ್ದರು. ಅಷ್ಟರೊಳಗೆ ನೀವು ಸಭೆ ನಡೆಸಿಲ್ಲ ಎಂದು ಪ್ರತಿಭಟಿಸುತ್ತಿದ್ದೀರಿ. 26ರಂದು ಬನ್ನಿ ಸಮಸ್ಯೆ ಕುರಿತು ಚರ್ಚಿಸೋಣ ಎಂದರು.

ಆದರೂ, ಸಚಿವರು ವಿರುದ್ಧ ರೈತರು ಧಿಕ್ಕಾರ ಕೂಗಿದರು. ಧಿಕ್ಕಾರದ ನಡುವೆಯೂ ಸಚಿವರು ಶಂಕರಮಠಕ್ಕೆ ತೆರಳಿ ಕೊರೊನಾ ವಾರಿಯರ್ಸ್‌ ವಿಡಿಯೊಗ್ರಾಫರ್ಸ್‌ ಮತ್ತು ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಜೊತೆಯಲ್ಲಿ ಶಾಸಕರಾದ ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್‌, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಬಿಜೆಪಿಯ ಮಂಗಳ ಸೋಮಶೇಖರ್‌ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು