News Karnataka Kannada
Thursday, April 18 2024
Cricket
ಮೈಸೂರು

ಉಂಡ ಮನೆಗೆ ಕನ್ನ ಹಾಕಿ 6 ಲಕ್ಷ ರೂ ಮೊಬೈಲ್‌ ದೋಚಿದ್ದವನ ಬಂಧನ

Photo Credit :

ಉಂಡ ಮನೆಗೆ ಕನ್ನ ಹಾಕಿ 6 ಲಕ್ಷ ರೂ ಮೊಬೈಲ್‌ ದೋಚಿದ್ದವನ ಬಂಧನ

ḍಮೈಸೂರು: ಇಲ್ಲಿಗೆ ಸಮೀಪದ ಟಿ.ನರಸೀಪುರ ಟೌನ್ ಹೆಳವರ ಹುಂಡಿ ಗ್ರಾಮದಲ್ಲಿರುವ ಸ್ಪಂದನ ಫೈನಾನ್ಸ್ ಲಿಮಿಟೆಡ್ ಕಛೇರಿಯ ಮುಂಭಾಗದ ಬಾಗಿಲಿನ ಬೀಗವನ್ನು ಹಾರೆಯಿಂದ ಮೀಟಿ ಮುರಿದು ನಕಲಿ ಕೀ ಬಳಸಿ ಸುಮಾರು 6.5ಲಕ್ಷರೂ.ಬೆಲೆ ಬಾಳುವ ವಿವೋ ಕಂಪನಿಗೆ ಸೇರಿದ 43 ಮೊಬೈಲ್ ಗಳನ್ನು ಕಳುವು ಮಾಡಿದ್ದು, ಈ ಸಂಬಂಧ ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ , ಸಿಪಿಐ ಎಂ ಅರ್‌ ಲವ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಗಿತ್ತು.

ತಂಡವು ವೈಜ್ಞಾನಿಕವಾಗಿ ಮಾಹಿತಿಯನ್ನು ಸಂಗ್ರಹಿಸಿ ಹುಣಸೂರು ತಾಲೂಕು ಮೂಡಲಕೊಪ್ಪಲು ಗ್ರಾಮ ನಿವಾಸಿ, ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಹರೀಶ್ ಬಿನ್ ಕೃಷ್ಣೇಗೌಡ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ಈತನಿಂದ ಕಳುವಾಗಿದ್ದ 6.5ಲಕ್ಷರೂ.ಬೆಲೆ ಬಾಳುವ 43 ವಿವೋ ಕಂಪೆನಿಯ ಮೊಬೈಲ್ ಗಳು, ಕೃತ್ಯಕ್ಕೆ ಬಳಸಿದ ಮೋಟರ್ ಬೈಕ್, ಫೈನಾನ್ಸ್ ಕಛೇರಿಯ ಕೀಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಈ ಕಛೇರಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದು ಕಳೆದ ಒಂದೂವರೆ ತಿಂಗಳಿನಿಂದ ಕೆಲಸ ಬಿಟ್ಟಿದ್ದ.

ಕೆಲಸ ಬಿಡುವ ಸಂದರ್ಭದಲ್ಲಿ ಫೈನಾನ್ಸ್ ಕಛೇರಿಯ ಒಂದು ಬೀಗದ ಕೈಯನ್ನು ಯಾರಿಗೂ ಗೊತ್ತಾಗದ ರೀತಿ ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿಕೊಂಡಿದ್ದ . ನಂತರ ಈ ಕೀಯನ್ನು ಬಳಸಿ ಕಳುವು ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಪತ್ತೆ ತಂಡದ ಕಾರ್ಯಕ್ಷಮತೆಯನ್ನು ಎಸ್ಪಿ ರಿಷ್ಯಂತ್ ಪ್ರಶಂಸಿಸಿ ನಗದು ಬಹುಮಾನ ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು