News Karnataka Kannada
Saturday, April 13 2024
Cricket
ಮೈಸೂರು

ಆಸ್ಪತ್ರೆ ದುರಂತ ; ಪೋಲೀಸರಲ್ಲಿ ಕೊಲೆ ದೂರು ದಾಖಲು

Photo Credit :

ಆಸ್ಪತ್ರೆ ದುರಂತ ; ಪೋಲೀಸರಲ್ಲಿ ಕೊಲೆ ದೂರು ದಾಖಲು

ಚಾಮರಾಜ ನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ೨೪ ಜನ ಸೋಂಕಿತರು ಮೃತರಾದ ಘಟನೆ ಗೆ ಸಂಬಂದಪಟ್ಟಂತೆ ರಾಜ್ಯ ಹೈ ಕೋರ್ಟ್‌ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಜತೆಗೇ ಸರ್ಕಾರವು ನೇಮಿಸಿರುವ ತನಿಖಾದಿಕಾರಿ ಶಿವಯೋಗಿ ಕಳಸದ್‌ ಅವರ ತನಿಖೆಯೂ ಪ್ರಗತಿಯಲ್ಲಿದೆ. ಇದೇ ವಿಷಯಕ್ಕೆ ಸಂಬಂದಪಟ್ಟಂತೆ ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಜಿಲ್ಲೆಯ ಇತರೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೇ ಮೃತಪಟ್ಟ ಸೋಂಕಿತರ ಸಾವಿಗೆ ಕಾರಣರಾದವರ ವಿರುದ್ಧ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಬುಧವಾರ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ನೀಡಿದ್ದಾರೆ.
ಸೋಂಕಿತರು ಆಮ್ಲಜನಕ ಸಿಗದೇ ತೀವ್ರತರ ನರಳಾಟದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಆರೋಗ್ಯ ಸಚಿವ ಡಾ.ಕೆ..ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್, ಕರ್ತವ್ಯ ನಿರತ ವೈದ್ಯರು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ಚಾಮರಾಜನಗರ ಮೆಡಿಕಲ್ ಕಾಲೇಜಿನ ಸಂಜೀವ್ ರೆಡ್ಡಿ, ಜಿಲ್ಲಾ ಸರ್ಜನ್‌ಗಳಾದ ಡಾ. ಮುರುಗೇಶ್, ಡಾ. ಶ್ರೀನಿವಾಸ್ ಅವರ ನೇತೃತ್ವದ ಆಡಳಿತ ಮಂಡಳಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಆಕ್ಸಿಜನ್ ಪೂರೈಕೆ ಗುತ್ತಿಗೆದಾರರು ಕಾರಣ. ಇವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು