News Karnataka Kannada
Sunday, April 14 2024
Cricket
ಮೈಸೂರು

`ಆನೆ ಚಲನವಲನ ಪಥ’ ಸಂರಕ್ಷಣೆ ಸೈಕ್ಲೋಥಾನ್

Photo Credit :

`ಆನೆ ಚಲನವಲನ ಪಥ’ ಸಂರಕ್ಷಣೆ ಸೈಕ್ಲೋಥಾನ್

ಮೈಸೂರು: ಕರ್ನಾಟಕ ಅರಣ್ಯ ಇಲಾಖೆ ಮೈಸೂರು ಅರಣ್ಯ ವಿಭಾಗ ವತಿಯಿಂದ ವನ್ಯಜೀವಿ ಸಪ್ತಾಹ-2020 ‘ಆನೆ ಚಲನವಲನ ಪಥ ಸಂರಕ್ಷಣೆ’ ವಿಷಯ ಕೇಂದ್ರಿತ ಸೈಕ್ಲೋಥಾನ್ “ಭವಿಷ್ಯಕ್ಕಾಗಿ ರಣಹದ್ದುಗಳು” ಕಾರ್ಯಕ್ರಮದಡಿ ಇಂದು ಸೈಕ್ಲೋಥಾನ್ ಐದನೇ ದಿನದ ಮೈಸೂರು-ರಾಮನಗರ ಮಾರ್ಗದ ಸೈಕ್ಲೋಥಾನ್ ಗೆ ಚಾಲನೆ ನೀಡಲಾಯಿತು.

ಮೈಸೂರು ಅರಣ್ಯ ಭವನದ ಆವರಣದಲ್ಲಿ ಮೈಸೂರು ವೃತ್ತದ ಹುಲಿಯೋಜನೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು 66 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಐದನೆ ದಿನದ ಮೈಸೂರು ಮಾರ್ಗದ ಸೈಕ್ಲೊಥಾನ್ ಗೆ ಚಾಲನೆ ನೀಡಲಾಗಿದೆ. ಆನೆ ಚಲನವಲನ ಪಥ ಸಂರಕ್ಷಣೆ ಬಗ್ಗೆ ಸೈಕ್ಲೊಥಾನ್ ಮೂಲಕ ಅರಿವು ಮೂಡಿಸಲಾಗುತ್ತದೆ. ಮೈಸೂರಿನಿಂದ ಹೊರಟು ರಾಮನಗರ ವರೆಗೂ ಸಾಗಿ ಸೈಕಲ್ ಸವಾರರು ಅರಿವು ಮೂಡಿಸಲಿದ್ದಾರೆ ಎಂದರು.

ಈ ಸಂದರ್ಭ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು