News Karnataka Kannada
Saturday, April 20 2024
Cricket
ಮೈಸೂರು

ಅರಿಶಿನ ಗಣಪನ ಮನೆಯಲ್ಲೇ ತಯಾರಿಸಿ ಪೂಜಿಸಿ

Photo Credit :

ಅರಿಶಿನ ಗಣಪನ ಮನೆಯಲ್ಲೇ ತಯಾರಿಸಿ ಪೂಜಿಸಿ

ಮೈಸೂರು: ಈ ಬಾರಿಯ ಗಣೇಶೋತ್ಸವ ಸಂಭ್ರಮಕ್ಕೆ ಕೊರೋನಾ ಅಡ್ಡಿಯಾಗಿದೆ. ನಮ್ಮ ಎಚ್ಚರಿಕೆಯಲ್ಲಿ ನಾವು ಹಬ್ಬವನ್ನು ಆಚರಿಸುವುದು ಅಗತ್ಯವಾಗಿದೆ. ಹೀಗಾಗಿ ಒಂದಷ್ಟು ಕ್ರಮಗಳನ್ನು ಅಳಡಿಸುವ ಮೂಲಕ ಆಚರಣೆ ಮಾಡಿ ಎಂಬುವುದು ಬಹುತೇಕರ ಸಲಹೆಯಾಗಿದೆ.

ಇವತ್ತು ನಾವು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣಕರ್ತರಾದವರು ಜನಪ್ರಿಯ ನಾಯಕ ಲೋಕಮಾನ್ಯ  ಬಾಲಗಂಗಾಧರನಾಥ ತಿಲಕರು. ಅವತ್ತಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಒಂದೆಡೆ ಸೇರಿಸಲು ಗಣಪತಿ ಉತ್ಸವ ಒಂದು ವೇದಿಕೆಯಾಯಿತು. ಅದು ಮುಂದೆ ರಾಷ್ಟ್ರೀಯ ಹಬ್ಬವಾಗಿ ಜಾರಿಗೆ ಬಂದಿದೆ.

ಈ ಬಾರಿ ಅರಿಶಿನದಿಂದ ತಯಾರು ಮಾಡಿದ ಗಣಪತಿಯನ್ನು ಹಬ್ಬದಲ್ಲಿ ಪೂಜಿಸಿ ಎಂಬುದು ಹಲವರ ಅಭಿಪ್ರಾಯವಾಗಿದೆ. ಯಾಕೆಂದರೆ ಅರಿಸಿನ ಎಂಬುದು ಗುಣ ಸಂಪನ್ನವಾಗಿದ್ದು, ಇದು ಭಾರತೀಯರ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿ ಹೋಗಿದೆ. ಎಲ್ಲ್ಲ ಮಂಗಳಕಾರ್ಯಗಳಲ್ಲಿ ಎಷ್ಟು  ಪ್ರಮುಖವೆಂದರೆ ಭಾರತ ದೇಶದ ಮಹಿಳೆಯರು ಅರಿಸಿನ-ಕುಂಕುಮ ಸೌಭಾಗ್ಯವೆಂದು ಭಾವಿಸುತ್ತಾರೆ.  ಇದು ಆರೋಗ್ಯದ ಪ್ರತೀಕ. ಶತಶತಮಾನಗಳಿಂದಲೂ  ಅರಿಸಿನವನ್ನು ಗಾಯಕ್ಕೆ, ಹಾಲಿಗೆ, ಕೆನ್ನೆಗೆ, ಪೂಜೆಗೆ, ಅರಿಸಿನ ಶಾಸ್ತ್ರ ಮತ್ತು ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ಉಪಯೋಗಿಸುತ್ತಾ ಬಂದಿರುವುದು ಎಲ್ಲರಿಗೂ ಸರ್ವವಿಧಿತ ಹೀಗಿರುವಾಗ ಅದರಿಂದ ಪುಟ್ಟ ಗಣಪತಿಯನ್ನು ಸೃಷ್ಟಿಸಿ ಬಳಿಕ ಪ್ರತಿಷ್ಠಾಪಿಸಿ ಪೂಜಿಸಿದರೆ ಬಳಿಕ ವಿಸರ್ಜನೆಗೂ ಅನುಕೂಲವಾಗುತ್ತದೆ ಎಂಬುದು ಕೆಲವರ ಸಲಹೆಯಾಗಿದೆ.

ಇನ್ನು ಕೊರೋನಾ ಬಂದಾಗಿನಿಂದ ಅರಿಸಿನ ರೋಗ ನಿರೋಧಕ ಶಕ್ತಿ ಆಗಿರುವುದರಿಂದ  ಎಲ್ಲರೂ ಈಗ  ಹಾಲಿಗೆ  ಅರಿಸಿನ ಹಾಕಿ ಕುಡಿಯುತ್ತಿದ್ದಾರೆ. ಇದೊಂದು ರೀತಿಯಲ್ಲಿ ಗೋಲ್ಡನ್ ಮಿಲ್ಕ್ ಎಂದೇ  ಪ್ರಸಿದ್ದಿ ಆಗಿಬಿಟ್ಟಿದೆ. ಮೊದಲಿನಿಂದಲೂ ಪಿಒಪಿ ಬಣ್ಣ ಬಣ್ಣದ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದು, ಇದು ನೋಡಲು ಆಕರ್ಷಣೆಯಾದರೂ ಪರಿಸರಕ್ಕೆ ಮಾರಕವಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸುವುದು ಕಂಡು ಬರುತ್ತಿದೆ.

 

ಈ ಬಾರಿ ಪರಿಸರ ಸ್ನೇಹಿ ಅರಿಸಿನ ಗಣಪನನ್ನು ಮನೆಯಲ್ಲಿಯೇ ತಯಾರಿಸಿ ಪೂಜಿಸಿ  ನಂತರ ಮನೆಯಲ್ಲಿಯೇ ವಿಸರ್ಜನೆ ಮಾಡಿ. ಆ ಮೂಲಕ ಪರಿಸರ ಮಾಲಿನ್ಯ ತಡೆಯೋಣ, ಪರಿಸರ ಉಳಿಸೋಣ. ಇದರೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿಟ್ಟು, ಸಾಮಾಜಿಕ ಅಂತರ ಕಾಪಾಡಿಕೊಂಡರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು