News Karnataka Kannada
Thursday, April 25 2024
ಮೈಸೂರು

ಅನುದಾನ ಅಸಮರ್ಪಕ ಬಳಕೆಗೆ ಸಂಸದ ಅಸಮಾಧಾನ

Photo Credit :

ಅನುದಾನ ಅಸಮರ್ಪಕ ಬಳಕೆಗೆ ಸಂಸದ ಅಸಮಾಧಾನ

ಮೈಸೂರು: ಜಿಲ್ಲಾಡಳಿತವು  ಕೇಂದ್ರ ಸರ್ಕಾರದ ಅನುದಾನವನ್ನು ಅಸಮರ್ಪಕವಾಗಿ  ಬಳಕೆ ಮಾಡಿಕೊಳ್ಳದಿರುವ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಈ ಕುರಿತು  ಜಿಲ್ಲಾಧಿಕಾರಿಗಳಿಗೆ  ಪತ್ರ ಬರೆದಿರುವ  ಅವರು  ಅನುದಾನಗಳ ಹಣವನ್ನು ನಿರ್ದಿಷ್ಟ ಕಾಮಗಾರಿಗಳಿಗೆ ಮಾತ್ರವೇ ಬಳಸುವಂತೆ ಸೂಚಿಸಿದ್ದಾರೆ.

ಪತ್ರದಲ್ಲಿ 14 ನೇ ಹಣಕಾಸು ಯೋಜನೆ ಉಳಿಕೆ ಹಣವಾದ ರೂ 09.30 ಕೋಟಿಗೂ 15 ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾಗಿರುವ 69.39 ಕೋಟಿ ರೂ ಹಣವನ್ನು ಅತ್ಯವಶ್ಯಕ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಈ ಅನುದಾನವನ್ನು ವಿದ್ಯಾರಣ್ಯಪುರಂ, ರಾಯನಕೆರೆ ಹಾಗೂ ಕೆಸರೆ ಘನ ತ್ಯಾಜ್ಯ ಘಟಕದ ನಿರ್ಮಾಣ ಕಾರ್ಯಗಳಿಗೆ  ಬಳಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಹಾಗೆಯೇ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, ಈ ಹಿಂದಿನಿಂದ ಮೇಯರ್ ಉಪಮೇಯರ್ ವರ್ಕ್ಸ್ ಸಮಿತಿ ಸದಸ್ಯರು, ಮಾಜಿ ಮೇಯರ್ ಗಳು ಪಾರ್ಟಿ ಲೀಡರ್ಸ್ ಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಹೊಂದಾಣಿಕೆ ರಾಜಕಾರಣಗಳ ಮೂಲಕ ಸಿಂಹಪಾಲನ್ನು ಪಡೆದುಕೊಳ್ಳುವಂತಹ ಅನಧಿಕೃತ ವ್ಯವಸ್ಥೆಯನ್ನು ಪಾಲಿಸಿಕೊಂಡು ಬಂದಿದ್ದಾರೆ.

ಇಂತಹ ಹೊಂದಾಣಿಕೆ ವ್ಯವಸ್ಥೆಯನ್ನು ಅಂತ್ಯಗೊಳಿಸಿ ಶೇ. 50 ರಷ್ಟು ಅನುದಾನ ರೂ.34.70 ಕೋಟಿ ಹಾಗೂ 14ನೇ ಹಣಕಾಸು ಯೋಜನೆಯ ಉಳಿಕೆಯಾಗಿರುವ ರೂ.9.30 ಕೋಟಿ ಹಣವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಿಯಮಾವಳಿ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ಅಭಿಪ್ರಾಯವನ್ನು ಪಡೆದು ಅನುದಾನ ವಿನಿಯೋಗ ಮಾಡಬೇಕು. ಕೇಂದ್ರ ಸರ್ಕಾರದ ಈ ಅನುದಾನವನ್ನು ಯಾವುದೇ ಕಾರಣಕ್ಕೂ ವೃತ್ತಗಳು, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಪೋಲು ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ  ತಾಕೀತು ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು