News Karnataka Kannada
Wednesday, April 24 2024
Cricket
ಮೈಸೂರು

ಅಡ್ಡದಿಟ್ಟಿ ಕಾರ್ ಚಾಲನೆ ಪ್ರಶ್ನಿಸಿದ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿ ಪರಾರಿ

Photo Credit :

ಅಡ್ಡದಿಟ್ಟಿ ಕಾರ್ ಚಾಲನೆ ಪ್ರಶ್ನಿಸಿದ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿ ಪರಾರಿ

ಮೈಸೂರು: ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡುತ್ತಿದ್ದ ಯುವಕರಿಗೆ ಬುದ್ಧಿ ಹೇಳಲು ಹೋದ ಜೆ.ಕೆ.ಟೈರ್ಸ್ ಇಂಜಿನಿಯರ್‍ ನ್ನು ಕಾರಿನಿಂದೆಳೆದು ಥಳಿಸಿದ್ದಲ್ಲದೇ ಅವರ ಕಾರನ್ನು ಕೂಡ ಜಖಂಗೊಳಿಸಿ, 9 ಸಾವಿರ ನಗದು ದೋಚಿ, ಕಾರಿನ ಕೀ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಜೆ.ಕೆ.ಟೈರ್ಸ್ ಇಂಜಿನಿಯರ್ ಸುರೇಂದ್ರ ಅಂಗಡಿ(50) ಘಟನೆಯಲ್ಲಿ ಗಾಯಗೊಂಡವರಾಗಿದ್ದು, ಕೆಲಸ ಮುಗಿಸಿಕೊಂಡು ರಿಂಗ್ ರಸ್ತೆ ಮಾರ್ಗವಾಗಿ ವಿಜಯನಗರ ನಾಲ್ಕನೇ ಹಂತದಲ್ಲಿರುವ ತಮ್ಮ ಮನೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಒಂದು ಬಿಳಿ ಬಣ್ಣದ ಕಾರು ಅಡ್ಡಾದಿಡ್ಡಿಯಾಗಿ ಬರುತ್ತಿತ್ತು. ತಮ್ಮ ಕಾರಿಗೆ ಅದು ಅಪಘಾತ ಮಾಡಬಹುದು ಎಂದು ಹೆದರಿ ತಮ್ಮ ಕಾರನ್ನು ಪಕ್ಕಕ್ಕೆ ಸರಿಸಿ ಅಡ್ಡಾದಿಡ್ಡಿಯಾಗಿ ಬಂದ ಕಾರಿನಲ್ಲಿದ್ದ ಐವರು ಯುವಕರನ್ನು ಕುರಿತು ಏಕೆ ಈ ರೀತಿ ಚಾಲನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಮುಂದೆ ಹೋದರು ಎನ್ನಲಾಗಿದೆ.

ನಂತರ ಕೆಲವೇ ನಿಮಿಷಗಳಲ್ಲಿ ಮತ್ತೆ ಹಿಂದಿನಿಂದ ಬಂದ ಆರೋಪಿಗಳು ಸುರೇಂದ್ರ ಅಂಗಡಿ ಅವರ ಕಾರನ್ನು ಮರಿಮಲ್ಲಪ್ಪ ಕಾಂಪೌಂಡ್ ಬಳಿ ಅಡ್ಡಗಟ್ಟಿ ಅವರನ್ನು ಕಾರಿನಿಂದೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಒಬ್ಬ ವ್ಯಕ್ತಿ ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಸುರೇಂದ್ರ ಅವರ ತಲೆಗೆ ಹೊಡೆದು ಗಾಯಗೊಳಿಸಿದನು. ಜತೆಗೆ ಉಳಿದ ನಾಲ್ವರು ಕೈ ಮತ್ತು ಕಾಲಿನಿಂದ ಸುರೇಂದ್ರ ಅವರ ಮೇಲೆ ಹಲ್ಲೆ ನಡೆಸಿ, ಸುರೇಂದ್ರ ಅವರ ಕಾರಿಗೂ ಕಲ್ಲಿನಿಂದ ಜಜ್ಜಿ ಜಖಂಗೊಳಿಸಿ, ಸುರೇಂದ್ರ ಅವರ ಬಳಿ ಇದ್ದ 9 ಸಾವಿರ ನಗದು ದೋಚಿ, ಕಾರಿನ ಕೀ ಕಿತ್ತುಕೊಂಡರು. ಈ ವೇಳೆ ಸುರೇಂದ್ರ ಅವರು ಕಿರುಚಿಕೊಂಡಾಗ ಜನ ಸೇರುತ್ತಿದ್ದಂತೆ ಐವರು ವ್ಯಕ್ತಿಗಳು ತಮ್ಮ ಕಾರನ್ನು ಸ್ಟಾರ್ಟ್ ಮಾಡಿಕೊಂಡು ಪರಾರಿಯಾದರು ಎಂದು ಸುರೇಂದ್ರ ತಿಳಿಸಿದ್ದಾರೆ. ಘಟನೆಯ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು