News Karnataka Kannada
Saturday, April 20 2024
Cricket
ಮೈಸೂರು

ಅಂಬೇಡ್ಕರ್ ಅನುಯಾಯಿಗಳು ಜಾಗೃತರಾಗಬೇಕು

Untitled 110
Photo Credit : News Kannada

ಮೈಸೂರು: ಸಂವಿಧಾನದ ಉಳಿವಿಗಾಗಿ ಶೋಷಿತರು, ಹಿಂದುಳಿದ ವರ್ಗದವರು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಅಂಬೇಡ್ಕರ್ ಅವರ ಅನುಯಾಯಿಗಳು ಜಾಗೃತರಾಗಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ಹೇಳಿದರು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ಕ್ಷೇತ್ರ ಸೇರುವ ಮಾಜಿ ಸಚಿವ ಡಾ. ಎಚ್ ಸಿ ಮಹದೇವಪ್ಪ ನವರ ಸ್ವಗ್ರಾಮದಲ್ಲಿ ಮಹಾನಾಯಕ ಭೀಮ ಬಳಗ ಮತ್ತು ಡಾಕ್ಟರ್ ಬಿಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ಶೋಷಿತರ ಹಿಂದುಳಿದವರ ದಲಿತರು ಮಹಿಳೆಯರು ಕಾರ್ಮಿಕರಿಗೆ ಎಲ್ಲ ರಂಗದಲ್ಲೂ ಸಾಮಾಜಿಕ ನ್ಯಾಯ ಸಿಗಬೇಕು ಎಂದು ಹೋರಾಟ ಮಾಡಿ ಸಂವಿಧಾನವನ್ನು ತಂದುಕೊಟ್ಟಂತಹ ಮಹಾ ನಾಯಕರು ಆದರೆ ಇವತ್ತು ನಮ್ಮನ್ನು ಆಳುವ ಸರ್ಕಾರಗಳು ಸಂವಿಧಾನವನ್ನು ತಿದ್ದುಪಡಿ ಮಾಡಿ ಮತ್ತೆ ಶೋಷಿತರು ಹಿಂದುಳಿದವರು ದಲಿತರು ಮಹಿಳೆಯರು ಕಾರ್ಮಿಕರು ಮುಂದುವರೆದ ಸಮುದಾಯದ ವರ್ಗದ ಕೈ ಕೆಳಗೆ ಕೆಲಸ ಮಾಡುವಂತಹ ಪರಿಸ್ಥಿತಿಯನ್ನು ತಂದೊಡ್ಡಿದ್ದಾರೆ ಎಂದರು.

ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ನಮ್ಮ ನಮ್ಮಲ್ಲೇ ಜಗಳ ತಂದಿಟ್ಟು ನಮ್ಮ ಒಗ್ಗಟ್ಟನ್ನು ಹೊಡೆಯಲು ನೋಡುತ್ತಿದ್ದಾರೆ ಅದಕ್ಕೆ ನಾವು ಅವಕಾಶ ಕೊಡದೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಹಾಗೆ ಹಿಂದೂ ಧರ್ಮ ಪಾಲಿಸಿ ಮುಂದುವರೆದ ವರ್ಗದವರು ಹೇಳುವ ಹಿಂದುತ್ವವನ್ನು ವಿರೋಧಿಸಿ ಸಂವಿಧಾನದ ಉಳಿವಿಗಾಗಿ ಎಲ್ಲರೂ ಜಾಗೃತರಾಗಬೇಕಾಗಿದೆ ಎಂದು ತಿಳಿಸಿದರು.

ಈಗಾಗಲೇ ದೇಶದಲ್ಲಿ ನಮ್ಮನ್ನಾಳುವ ಸರಕಾರಗಳು ಸಂವಿಧಾನದ ತಿದ್ದುಪಡಿಯ ಬಗ್ಗೆ ಮಾತನಾಡುತ್ತಿರುವುದು ನಮಲ್ಲರಿಗೂ ತಿಳಿದಿರುವ ವಿಷಯ ವಿಚಾರ ಇದರ ಉಳಿವಿಗಾಗಿ ನಾವೆಲ್ಲರೂ ಮುಂದೆ ಹೋರಾಟ ಮಾಡುವ ಅನಿವಾರ್ಯತೆ ಎದುರಾದಾಗ ನಾವು ಹೋರಾಟಕ್ಕೆ ಅಣಿಯಾಗಬೇಕು ಎಂದು ತಿಳಿಸಿದರು.

ಕೊಳ್ಳೇಗಾಲದ ಚೇತನ ಬೌದ್ಧ ವಿಹಾರ ಪೂಜ್ಯ ಶ್ರೀ ಮನೋ ರಕ್ಷಿತ ಬಂತೇಜಿ, ಅಂಬೇಡ್ಕರ್ ಚಿಂತಕ ಡಾ.ಕೃಷ್ಣಮೂರ್ತಿ ಡಾ.ಬಿಪಿ ಮಹೇಶ್ ಚಂದ್ರು ಗುರು, ಕಾಂಗ್ರೆಸ್ ಯುವ ಮುಖಂಡ ಸುನಿಲ್ ಬೋಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಂಜಪ್ಪ ತಗಡೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು