ಮೈಸೂರು: ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ಅವರು ಮುಡಾಗೆ ಕೇಳಿದ್ದು 13 ಸೈಟ್ ಆದರೆ ಮುಡಾ ಕೊಟ್ಟದ್ದು 14 ಸೈಟ್ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಹೌದು. . . ಸಿಎಂ ಸಿದ್ದರಾಮಯ್ಯ ಖಾಸಗಿ ಆಪ್ತ ಸಹಾಯಕ ಎಸ್.ಜಿ. ದಿನೇಶ್ ಕುಮಾರ್ ಅವರು ಪಾರ್ವತಿ ಹೆಸರಿನಲ್ಲಿ 13 ಸೈಟ್ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಮುಡಾ 14 ಸೈಟ್ ಕೊಟ್ಟಿರುವುದು ಬಹಿರಂಗವಾಗಿದೆ.
13-01-2022 ರಂದು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಬರೆದ ಪತ್ರದಲ್ಲಿ ತಮಗೆ 13 ಸೈಟ್ ಗಳನ್ನು ನೋಂದಣಿ ಮಾಡಿಸಿಕೊಡುವಂತೆ ಮುಡಾಗೆ ಪತ್ರ ಬರೆದಿದ್ದರು. ಆದರೆ ಮುಡಾ 14 ಸೈಟ್ ನೋಂದಣಿ ಮಾಡಿಸಿಕೊಟ್ಟಿರುವುದು ಪತ್ರದಲ್ಲಿ ಬಹಿರಂಗವಗಿದೆ.
ಇನ್ನು ಪತ್ರಕ್ಕೆ ಪಾರ್ವತಿ ಅವರ ಬದಲಿಗೆ ಮುಖ್ಯಮಂತ್ರಿಗಳು ಖಾಸಗಿ ಆಪ್ತ ಸಹಾಯಕ ಎಸ್.ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಸಹಿ ಹಾಕಿದ್ದಾರೆ. ಅರ್ಜಿದಾರ ಹೊರತುಪಡಿಸಿ ಉಳಿದವರಿಗೆ ಸಹಿ ಮಾಡಲು ಅವಕಾಶವಿಲ್ಲ. ಇದು ಗೊತ್ತಿದ್ದೂ ಅಧಿಕಾರಿಗಳು ನಿವೇಶನ ಖಾತೆ ಮಾಡಿದ್ದಾರೆ. ಕೇಳಿದ್ದು ಮಂಜೂರಾಗಿದ್ದ 13 ನಿವೇಶನ, ಆದರೆ 14 ನಿವೇಶನ ಖಾತೆ ಮಾಡಿಕೊಡಲಾಗಿದೆ.