Bengaluru 21°C
Ad

ಹಲವು ಕಳವು ಪ್ರಕರಣ: ಆರೋಪಿ ಪೊಲೀಸರ ವಶಕ್ಕೆ

ಹಲವು ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿ ಯೋರ್ವ ನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು : ಹಲವು ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿ ಯೋರ್ವ ನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಕೃಷ್ಣನಗರದ ಮುಹಮ್ಮದ್ ಅಶ್ರಫ್ ( ೪೨) ಬಂಧಿತ ಆರೋಪಿ. ವರ್ಕಾಡಿ ಪರಿಸರದ ವ್ಯಾಪಾರ ಮಳಿಗೆ , ಆರಧಾನಾಲಯ ಮೊದಲಾದ ಕಡೆಗಳಿಂದ ಈತ ಕಳವು ನಡೆಸಿದ್ದನು.

Ad

ಕೆಲದಿನಗಳ ಹಿಂದೆ ವರ್ಕಾಡಿ ಬಜಿಲಕೇರಿಯ ಬಾಲ ಯೇಸು ಪ್ರಾರ್ಥನಾ ಮಂದಿರ , ಪಾವಳದ ಶ್ರೀ ಕೊರಗಜ್ಜ ಕಟ್ಟೆ ಯ ಕಾಣಿಕೆ ಹುಂಡಿ ಹಾಗೂ ಪಾಡಿ ಎಂಬಲ್ಲಿ ಅಂಗಡಿಗೆ ನುಗ್ಗಿ ಕಳವು ನಡೆಸಿದ್ದನು. ಈತ ಮಲಪ್ಪುರಂನಲ್ಲಿರುವುದಾಗಿ ಲಭಿಸಿದ ಖಚಿತ ಮಾಹಿತಿಯಂತೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.

Ad
Ad
Ad
Nk Channel Final 21 09 2023