ಮಂಗಳೂರು: ಮಂಗಳೂರಿನಿಂದ 3000 ಕಿಲೋ ಮೀಟರ್ ದೂರದ ಪ್ರಸಿದ್ದ ಯಾತ್ರಾ ಸ್ಥಳ ಕೇದಾರನಾಥ್‌ಗೆ ಇಬ್ಬರು ಯುವಕರು ಸೈಕಲ್ ನಲ್ಲಿ ಸಾಹಸ ಯಾತ್ರೆ ಕೈಗೊಂಡಿದ್ದಾರೆ.ಮಂಗಳೂರಿನ ಪುನೀತ್, ರಕ್ಷಿತ್ ಎಂಬ ಯುವಕರು ಮಂಗಳೂರು ನಗರದ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಮಂಗಳವಾರ ಮುಂಜಾನೆ ತಮ್ಮ ಸಾಹಸ ಯಾತ್ರೆ ಆರಂಭಿಸಿದ್ದಾರೆ.
ಧಾರ್ಮಿಕ ಕೇಂದ್ರ ಸಂದರ್ಶಿಸುವ ಜೊತೆಗೆ ಪರಿಸರ ಉಳಿವಿಗಾಗಿ, ಮರಗಿಡಗಳನ್ನು ಬೆಳೆಸಲು ಮತ್ತು ಪ್ಲಾಸ್ಟಿಕ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ ಈ ಸೈಕಲ್ ಯಾತ್ರೆಯ ದಾರಿಯುದ್ದಕ್ಕೂ ಮಾಡಲಿದ್ದಾರೆ. ಕರಾವಳಿ ವೀರ ಶೈವ ಕ್ಷೇಮಾಭೀವೃದ್ದಿ ಸಂಘದ ಪದಾಧಿಕಾರಿಗಳು ಶುಭ ಹಾರೈಸಿ ಕದ್ರಿ ದೇವಳದಲ್ಲಿ ಯುವಕರನ್ನು ಬೀಳ್ಕೊಟ್ಟರು.
Ad