Bengaluru 21°C
Ad

ಉಳ್ಳಾಲ: ಸೋಮೇಶ್ವರದ ರುದ್ರಬಂಡೆಯಿಂದ ಕಡಲಿಗೆ ಹಾರಿದ ಯುವತಿಯ ರಕ್ಷಣೆ

ಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ ಮಾಡಿದ ಘಟನೆ ಉಳ್ಳಾಲದ ಸೋಮೇಶ್ವರದಲ್ಲಿ ನಡೆದಿದೆ.

ಮಂಗಳೂರು: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ ಮಾಡಿದ ಘಟನೆ ಉಳ್ಳಾಲದ ಸೋಮೇಶ್ವರದಲ್ಲಿ ನಡೆದಿದೆ. ಸೋಮೇಶ್ವರದ ರುದ್ರಬಂಡೆಯಿಂದ ಯುವತಿ ಕಡಲಿಗೆ ಹಾರಿದ್ದು, ಯುವತಿಯನ್ನ ಸ್ಥಳೀಯ ಮೀನುಗಾರರು ರಕ್ಷಿಸಿರುವ ಘಟನೆ ನಡೆದಿದೆ.

Ad

ಉಳ್ಳಾಲ ಸಮೀಪ ಮಾಡೂರು ಬಾಡಿಗೆ ಮನೆಯಲ್ಲಿ ಯುವತಿ ವಾಸಿಸುತ್ತಿದ್ದಳು. ಮಂಗಳೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದಾಳೆ. ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿಗಳನ್ನು ಬಳಸಿ ಯುವತಿಯ ರಕ್ಷಣೆ ಮಾಡಲಾಗಿದೆ. ಯುವತಿ ಸುರಕ್ಷಿತವಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Ad
Nk Channel Final 21 09 2023