Bengaluru 28°C
Ad

ಉಳ್ಳಾಲ: ನೇಣಿಗೆ ಶರಣಾದ ಎಲೆಕ್ಟ್ರೀಶಿಯನ್ ಶ್ರವಣ್ ಆಳ್ವ

Shravan Alva

ಮಂಗಳೂರು: ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಉಳ್ಳಾಲದಲ್ಲಿ ಯುವಕ ನಡೆದಿದೆ. ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಎಂಬಲ್ಲಿ ಘಟನೆ ನಡೆದಿದೆ.ತಾರಿಪಡ್ಪು ವೈದ್ಯನಾಥ ದೇವಸ್ಥಾನದ ಬಳಿಯ ನಿವಾಸಿ ಶ್ರವಣ್ ಆಳ್ವ (25) ಮೃತ ಯುವಕ.

ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದ ಶ್ರವಣ್ ಗುರುವಾರ ರಾತ್ರಿ ಸ್ನೇಹಿತನ್ನು ಭೇಟಿಯಾಗಿ ಮನೆಗೆ ಬಂದು ಊಟ ಮಾಡಿ ಟಿವಿ ವೀಕ್ಷಿಸಿ ಬಳಿಕ ಮಲಗಲು ತನ್ನ ಕೋಣೆಗೆ ಹೋಗಿದ್ದಾನೆ. ಮಧ್ಯರಾತ್ರಿ ಶ್ರವಣ್ ಅಣ್ಣ ಕೆಲಸ ಮುಗಿಸಿ ಮನೆಗೆ ಬಂದಾಗ ಶ್ರವಣ್ ಬೆಡ್ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಘಟನಾ ಸ್ಥಳಕ್ಕೆ ಉಳ್ಳಾಲ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Ad
Ad
Nk Channel Final 21 09 2023