ಮಂಗಳೂರು : ನವಂಬರ್ ತಿಂಗಳ ಎರಡು ವಾರಗಳ ಕಾಲ ನಡೆಯುವ ಯೋಗ ಶಿಬಿರವು ಮಂಗಳಾದೇವಿ ಸಮೀಪ ರಾಮಕೃಷ್ಣ ಮಠದಲ್ಲಿ ಮಠದ ಅಧ್ಯಕ್ಷರಾದ ಜಿತಕಾಮಾನಂದಜೀ ಮಹಾರಾಜ್ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಅವರು ಅಷ್ಠಾಂಗ ಯೋಗದ ಮೂಲಕ ಚಂಚಲವಾದ ಮನಸ್ಸನ್ನು ಒಂದೆಡೆ ನಿಲ್ಲಿಸಲು ಸಾಧ್ಯವಾಗುತ್ತದೆ. ಹಾಗೇ ಯೋಗದಿಂದ ಏಕಾಗ್ರತೆಯನ್ನು ಸಾಧಿಸಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ದೈಹಿಕ ಪ್ರಯೋಜನಗಳ ಜೊತೆಗೆ, ಯೋಗವು ದೀರ್ಘಾವಧಿಯಲ್ಲಿ ಮಾನಸಿಕವಾಗಿ ಪ್ರಯೋಜನವನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಒತ್ತಡದಿಂದ ಬಳಲುತ್ತಿದ್ದರೆ, ಯೋಗಾಭ್ಯಾಸವು ನಿಮ್ಮ ಮಾನಸಿಕ ನಡವಳಿಕೆಯಲ್ಲಿ ಬದಲಾವಣೆಯನ್ನು ತರುತ್ತದೆ. ಧ್ಯಾನ ಮತ್ತು ಉಸಿರಾಟದ ವ್ಯಾಯಾಮವನ್ನು ಸಂಯೋಜಿಸಿದರೆ, ಯೋಗವು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನಾವು ಮಾನಸಿಕ ಶಾಂತಿಯನ್ನು ಪಡೆಯಲು ಹೋರಾಡುವ ಯುಗದಲ್ಲಿ ಬದುಕುತ್ತಿದ್ದೇವೆ. ದೈಹಿಕ ಚಟುವಟಿಕೆಗಳ ಕೊರತೆಯು ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಯಮಿತವಾಗಿ ಯೋಗಾಭ್ಯಾಸವು ಶಾಂತತೆಯನ್ನು ತರಲು ಸಹಾಯ ಮಾಡುತ್ತದೆ, ದೇಹದ ಜಾಗೃತಿಯನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ನಿದ್ರೆಯ ಮಾದರಿಗಳಿಂದ ಪರಿಹಾರ. ಯೋಗಾಭ್ಯಾಸವು ನಿಮಗೆ ಬಹಳ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದರು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಶಿಬಿರಾರ್ಥಿಗಳಿಗೆ ಯೋಗದ ಮಾಹಿತಿ, ನಿಯಮ ತಿಳಿಸಿದರು. ಉದ್ಘಾಟನೆ ಸಂದರ್ಭದಲ್ಲಿ ಶ್ರೀ ನರಸಿಂಹ ಶೆಟ್ಟಿ ಹಾಗೂ ಡಾ. ಹರಿದಾಸ್ ಸೋಮಯಾಜಿ ಉಪಸ್ಥಿತರಿದ್ದರು. ಶ್ರೀ ದೇಲಂಪಾಡಿ ಶಿಷ್ಯರಾದ ಸುಮಾ ಹಾಗೂ ಚಂದ್ರಹಾಸ ಬಾಳ ಇವರು ಸಹಕರಿಸಿದರು. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು.