ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯೆನೆಪೋಯ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾದ ಯೆನೆಪೋಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ನರಿಂಗಾನ, ಮಂಗಳೂರು ಇದರ ಪ್ರಥಮ ಬ್ಯಾಚಿನ (2018-19) ವಿದ್ಯಾರ್ಥಿಗಳ ಪದವಿ ಗ್ರಹಣ ಸಮಾರಂಭ “ಸಮಾವರ್ತನಂ -2024” (ಬಿ.ಎ.ಎಂ.ಎಸ್ ಪದವಿ ಪೂರ್ಣಗೊಳಿಸುವಿಕೆ) 06 ರಂದು ಅಪರಾನ್ಹ 2.00 ಗಂಟೆಯಿಂದ 4 ಗಂಟೆಯವರೆಗೆ ಯೆನ್ಡುರೆನ್ಸ್ ಸಭಾಂಗಣದಲ್ಲಿ ಸಮಾಪನಗೊಂಡಿತು.
ಮುಖ್ಯ ಅತಿಥಿಗಳಾಗಿ ಡಾ.ಮೊಹಮ್ಮದ್ ಇಕ್ಬಾಲ್ ಜಿಲ್ಲಾ ಆಯುಷ್ ಅಧಿಕಾರಿಗಳು, ಆಯುರ್ವೇದ ಚಿಕಿತ್ಸೆ ಹಾಗೂ ಅದರ ಪ್ರಾಮುಖ್ಯತೆ ವಿಶೇಷವಾಗಿ ಕೇಂದ್ರ ಸರಕಾರದ ವಿವಿಧ ಯೋಜನೆಗಳು ಹಾಗೂ ಅವಕಾಶಗಳ ಬಗ್ಗೆ ಮಾಹಿತಿ ಒದಗಿಸಿದರು, ಗೌರವ ಅತಿಥಿಗಳಾಗಿ ಉಪಕುಲಪತಿಗಳಾದ ಪ್ರೊ. ಬಿ ಹೆಚ್. ಶ್ರೀಪತಿ ರಾವ್ ಅವರು ನೂತನ ವೈದ್ಯರಿಗೆ ಶುಭಾಶಯ ಕೋರಿ ಉನ್ನತ ವ್ಯಾಸಾಂಗದ ಮಹತ್ವ ಹಾಗೂ ಅದರ ಪ್ರಯೋಜನಗಳನ್ನು ತಿಳಿಯಪಡಿಸಿದರು.
ರಿಜಿಸ್ಟ್ರಾರ್ ಡಾ.ಗಂಗಾಧರ ಸೋಮಯಾಜಿ, ಯೇನೆಪೋಯ ಆಯುರ್ವೇದ ಕಾಲೇಜಿನ ಬೆಳವಣಿಗೆ ಹಾಗೂ ಸದರಿ ಬ್ಯಾಚಿನ ಪರೀಕ್ಷೆ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಹಾಗೂ ಪ್ರಾಂಶುಪಾಲರಾದ ಡಾ. ಗುರುರಾಜ ಹೆಚ್ ಅಧ್ಯಕ್ಷೀಯ ಭಾಷಣ ಮಾಡಿದರು. ಡಾ. ಶುಬದ ವಿ ಐ, ಆಹ್ವಾನಿತರನ್ನು ಸ್ವಾಗತಿಸಿದರು, ಡಾ.ಅಜಯ್ ಭಟ್ ಯು, ಪದವೀಧರರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಹಾಗೂ ಡಾ.ಅಜಂತ ಎಸ್ ಕೆ, ವಂದನಾರ್ಪಣೆ ಗೈದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಮಾರ್ಪಣೆಗೊಂಡಿತು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.