Bengaluru 18°C

ಬಂಟ್ವಾಳ: ಡಿ. 8 ರಂದು ಯಕ್ಷಾವಾಸ್ಯಂ ಕಾರಿಂಜ ಚತುರ್ಥ ವಾರ್ಷಿಕೋತ್ಸವ

ಯಕ್ಷಾವಾಸ್ಯಂ ಕಾರಿಂಜ ಚತುರ್ಥ ವಾರ್ಷಿಕೋತ್ಸವ ಡಿಸೆಂಬರ್ 8ರಂದು ಕಾಡಬೆಟ್ಟಿನ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಅಪರಾಹ್ನ 2 ಗಂಟೆಗೆ ನಡೆಯಲಿದೆ ಎಂದು ಸಂಚಾಲಕಿ ಸಾಯಿಸುಮಾ ನಾವಡ ಹೇಳಿದ್ದಾರೆ.

ಬಂಟ್ವಾಳ: ಯಕ್ಷಾವಾಸ್ಯಂ ಕಾರಿಂಜ ಚತುರ್ಥ ವಾರ್ಷಿಕೋತ್ಸವ ಡಿಸೆಂಬರ್ 8ರಂದು ಕಾಡಬೆಟ್ಟಿನ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಅಪರಾಹ್ನ 2 ಗಂಟೆಗೆ ನಡೆಯಲಿದೆ ಎಂದು ಸಂಚಾಲಕಿ ಸಾಯಿಸುಮಾ ನಾವಡ ಹೇಳಿದ್ದಾರೆ.


ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲ ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂದರ್ಭ ಸಂಜೆ 6.30ರ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯಕ್ಷಾವಾಸ್ಯಮ್ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯ ದಂಪತಿಗೆ ನೀಡಿ ಗೌರವಿಸಲಾಗುವುದು. ಅಭಿನಂದನಾ ನುಡಿಗಳನ್ನು ಕಲಾವಿದ ಚಂದ್ರಶೇಖರ ಭಟ್ ಕೊಂಕಣಾಜೆ ಆಡಲಿದ್ದಾರೆ ಎಂದರು.


ಅಪರಾಹ್ನ 2 ಗಂಟೆಗೆ ಪಿ.ಜಿನರಾಜ ಆರಿಗ ದೀಪೋಜ್ವಲನ ಮಾಡಲಿದ್ದಾರೆ. ಬಳಿಕ ಯಕ್ಷಗಾನದ ಪೂರ್ವರಂಗವನ್ನು ಕೇಂದ್ರದ ವಿದ್ಯಾರ್ಥಿಗಳು ಶ್ರೀನಿವಾಸ ಬಳ್ಳಮಂಜ ನಿರ್ದೇಶನದಲ್ಲಿ ಮಾಡಲಿದ್ದಾರೆ.


ಅದಾದ ನಂತರ, ಮಕ್ಕಳ ಯಕ್ಷಗಾನ ನರಕಾಸುರ, ಮೈಂದ ದ್ವಿವಿದ ಶ್ರೀನಿವಾಸ ಬಳ್ಳಮಂಜ ಮತ್ತು ಸಾಯಿಸುಮಾ ಎಂ. ನಾವಡ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸುವರು.


ಅಭ್ಯಾಗತರಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಕಾರಿಂಜೇಶ್ವರ ದೇವಸ್ಥಾನ ವ್ಯವಸ್ಥಾಪಕ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲರಾದ ಉದಯ ಕುಮಾರ್ ಜೈನ್, ಜೇಸಿ ಮಡಂತ್ಯಾರು ನಿಕಟಪೂರ್ವ ಅಧ್ಯಕ್ಷ ಅಶೋಕ್ ಗುಂಡಿಯಲ್ಕೆ, ಆಲಂಪುರಿಗುತ್ತು ಶ್ರುತಾಂಜನ್ ಜೈನ್, ಶಾರದಾಂಬಾ ಭಜನಾ ಮಂದಿರ ಕಾಡಬೆಟ್ಟು ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾವಳಪಡೂರು ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ,


ಕಾವಳಮುಡೂರು ಗ್ರಾಪಂ ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ಕಾವಳಪಡೂರು ಗ್ರಾಪಂ ಸದಸ್ಯ ವೀರೇಂದ್ರ ವಗ್ಗ ಭಾಗವಹಿಸುವರು. ವಿದ್ಯಾರ್ಥಿ ಪುರಸ್ಕಾರ, ಬಳಿಕ ಕಿತ್ತೂರು ರಾಣಿ ಚೆನ್ನಪ್ಪ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈ ನಿರ್ದೇಶನದಲ್ಲಿ ವೀರಮಣಿ ಕಾಳಗ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಯಕ್ಷಕೂಟ ಮಧ್ವ ಸಂಚಾಲಕ ಭಾಸ್ಕರ ಶೆಟ್ಟಿ ಮಧ್ವ, ಯಕ್ಷಾವಾಸ್ಯಂ ಸದಸ್ಯರಾದ ಸುಮನಾ ಯಳಚಿತ್ತಾಯ, ಪೋಷಕರಾದ ರತ್ನಾ ತುಕಾರಾಮ ಗೌಡ ಉಪಸ್ಥಿತರಿದ್ದರು.


Nk Channel Final 21 09 2023