Bengaluru 26°C
Ad

ಶ್ಯಾಮಲಾ ಎಜುಕೇಶನ್ ಟ್ರಸ್ಟ್‌ನ ಶ್ಯಾಮ್ ಇನ್‌ಸ್ಟಿಟ್ಯೂಟ್ ಶುಭಾರಂಭ

ಶ್ಯಾಮಲಾ ಎಜುಕೇಶನ್ ಟ್ರಸ್ಟ್‌ನ ಶ್ಯಾಮ್ ಇನ್‌ಸ್ಟಿಟ್ಯೂಟ್ ಕಂಕನಾಡಿಯ ಮಂಗಳೂರು ಗೇಟ್ ಕಾಂಪ್ಲೆಕ್ಸ್ ಪಕ್ಕದ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಮಂಗಳೂರು : ಶ್ಯಾಮಲಾ ಎಜುಕೇಶನ್ ಟ್ರಸ್ಟ್‌ನ ಶ್ಯಾಮ್ ಇನ್‌ಸ್ಟಿಟ್ಯೂಟ್ ಕಂಕನಾಡಿಯ ಮಂಗಳೂರು ಗೇಟ್ ಕಾಂಪ್ಲೆಕ್ಸ್ ಪಕ್ಕದ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಎಸೆಸೆಲ್ಸಿ, ಪಿಯುಸಿ, ಪದವಿಯಲ್ಲಿ ಉತ್ತೀರ್ಣ ಮತ್ತು ಅನುತ್ತೀರ್ಣ ಶಿಕ್ಷಣವನ್ನು ಅರ್ಧದಲ್ಲಿ ತೊರೆದ ವಿದ್ಯಾರ್ಥಿಗಳಿಗೆ ವಾಯುಮಾನ ಕ್ಷೇತ್ರದಲ್ಲಿ ಕೌಶಲ ಅಭಿವೃದ್ಧಿ ಉದ್ಯೋಗ ಅಧಾರಿತ ಕೋರ್ಸ್‌ಗಳೊಂದಿಗೆ ಉದ್ಯೋವಕಾಶವನ್ನು ಒದಗಿಸುವ ಧ್ಯೈಯವನ್ನು ಇಟ್ಟುಕೊಂಡು ಶ್ಯಾಮ್ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡಿದೆ.

ನೂತನ ಶಿಕ್ಷಣ ಸಂಸ್ಥೆಯನ್ನು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಂತರ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು, ಸಂದೇಶ್ ಸುವರ್ಣ ಅವರು ಮಾದರಿ ಸಂಸ್ಥೆಯನ್ನು ಮಂಗಳೂರಿನಲ್ಲಿ ಆರಂಭಿಸಿರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳು ಕೌಶಲ ಆಧಾರಿತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕು ಎಂದು ಹೇಳಿ ಶ್ಯಾಮ್ ಇನ್‌ಸ್ಟಿಟ್ಯೂಟ್‌ಗೆ ಶುಭ ಹಾರೈಸಿದರು.

ಿ

ಶಾಸಕರಾದ ಡಾ. ವೈ ಭರತ್ ಶೆಟ್ಟಿ ಅವರು ಮಾತನಾಡಿ, ಮಂಗಳೂರು ನಗರದಲ್ಲಿ ಉದ್ಯೋಗ ಮತ್ತು ಮಾರುಕಟ್ಟೆ ಸಂಬಂಧಿತವಾದ ಎಲ್ಲಾ ಕೋರ್ಸ್‌ಗಳು ಆರಂಭವಾಗಿರುವುದು ಖುಷಿಯ ವಿಚಾರ. ಮಂಗಳೂರಿಗೆ ಇಂತಹ ಇನ್‌ಸ್ಟಿಟ್ಯೂಟ್‌ನ ಅವಶ್ಯಕತೆ ಇದೆ ಎಂದರು.

ಮಂಗಳೂರು ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಪದವಿ ಕಲಿತ ವಿದ್ಯಾರ್ಥಿಗಳು ಮುಂದಿನ ಶಿಕ್ಷಣವಾಗಿ ಏವಿಯೇಶನ್ ಕೋರ್ಸ್‌ಗಳಲ್ಲಿ ಶಿಕ್ಷಣವನ್ನು ಪಡೆದು ಉದ್ಯೋಗಕ್ಕೆ ತೆರಳುವ ವಿನೂತನ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಮಾತ್ರವಲ್ಲದೆ ಶ್ಯಾಮ್ ಇನ್‌ಸ್ಟಿಟ್ಯೂಟ್ ಮುಖಾಂತರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೊಸತನವನ್ನು ಸಂದೇಶ್ ಸುವರ್ಣ ಅವರು ನೀಡಿದ್ದಾರೆ ಎಂದರು.

ಶ್ಯಾಮಲಾ ಎಜ್ಯುಕೇಶ್ ಟ್ರಸ್ಟ್‌ನ ಚೇರ್‌ಮೆನ್ ಮತ್ತು ಮ್ಯಾನೇಜಿಂಗ್ ಡೆರೆಕ್ಟರ್ ಸಂದೇಶ್ ಸುವರ್ಣ ಅವರು ಮಾತನಾಡಿ, ಎಸೆಸೆಲ್ಸಿ, ಪಿಯುಸಿ ಮತ್ತು ಪದವಿ ಉತ್ತೀರ್ಣ ಮತ್ತು ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದೇವೆ. ಜೊತೆಗೆ ಸಿಇಟಿ, ನೀಟ್ ತರಬೇತಿಯನ್ನು ಕೂಡ ನೀಡಲಾಗುವುದು ಎಂದರು.

ಇದೇ ವೇಳೆ ಭಾರತೀಯ ವೈದ್ಯಕೀಯ ಸಂಸ್ಥೆಯ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅನಿಲ್‌ದಾಸ್. ಮಂಗಳೂರು ಪಾಲಿಕೆ ಸದಸ್ಯರಾದ ಕಾವ್ಯ ನಟರಾಜ್ ಆಳ್ವಾ, ಸಂಸ್ಥೆಯ ಹಿರಿಯ ಶೈಕ್ಷಣಿಕ ವ್ಯವಸ್ಥಾಪಕ ನಿತೇಶ್, ಶ್ಯಾಮ್ ಶಿಕ್ಷಣ ಸಂಸ್ಥೆಯ ಎಚ್.ಆರ್. ಅನುಶ್ರೀ, ಶೈಕ್ಷಣಿಕ ಸಲಹೆಗಾರ ಅಣ್ಣಯ್ಯ ಶೆಟ್ಟಿ, ವ್ಯವಹಾರ ಅಭಿವೃದ್ಧಿ ಅಧಿಕಾರಿಗಳಾದ ಯತೀಶ್ ರಾವ್, ರೋಹನ್ ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad