Bengaluru 25°C
Ad

ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಪ್ರಕರಣ: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹೇಳಿಕೆ

ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿಕೆ ನೀಡಿದ್ದಾರೆ.

ಪುತ್ತೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿಕೆ ನೀಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಹಿಂದೂ ಸಮಾಜ ಮೈಮರೆತಿದೆ. ಆ ಕಾರಣದಿಂದಾಗಿ ರಾಜ್ಯದಲ್ಲಿ ಭ್ರಷ್ಟ, ದುಷ್ಟ, ಮತಾಂಧ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಬಿಟ್ಟಿ ಭಾಗ್ಯಗಳನ್ನ ದ.ಕ -ಉಡುಪಿ ಜಿಲ್ಲೆಯವರು ತಿರಸ್ಕರಿಸಿದ್ದಾರೆ. ಆದ್ರೆ ಉಳಿದ ಜಿಲ್ಲೆಯವರು ಬಿಟ್ಟಿ ಭಾಗ್ಯಗಳಿಗೆ ಸೋತು ಕಾಂಗ್ರೆಸ್ ಗೆ ಮತ ಹಾಕಿದ ಪರಿಣಾಮ ಚಡಪಡಿಸುವ ಪರಿಸ್ಥಿತಿ ಬಂದಿದೆ.

Ad

ಇಡೀ ಹಿಂದೂ ಸಮಾಜವನ್ನ ದಬ್ಬಾಳಿಕೆ ಮಾಡುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ. ಮುಸಲ್ಮಾನರ ಓಟು ಬ್ಯಾಂಕ್ ಗಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡ್ತಾ ಇದ್ದಾರೆ. ಆರ್ ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ರೈತರ ಭೂಮಿಯಲ್ಲಿ ಎಂಟ್ರಿ ಮಾಡಿರೋದು ಸರಿಯಲ್ಲ. ಈ ಮೂಲಕ ರೈತ ವಿರೋಧಿ ಸಿದ್ದರಾಮಯ್ಯ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೇ ಮಠ, ಮಂದಿರಗಳ ಆಸ್ತಿಯಲ್ಲೂ ಕೂಡ ಇಂತದ್ದೇ ಎಂಟ್ರಿಯನ್ನು ಮಾಡಿದ್ದಾರೆ.

Ad

ಇದು ಇಡೀ ಹಿಂದೂ ಸಮಾಜದ ಮೇಲೆ ಮಾಡಿದ ಅನ್ಯಾಯ. ಹಿಂದೂಗಳ ಆಸ್ತಿಯನ್ನ ಕಬಳಿಸುವ ಕೆಲಸವನ್ನ ಜಮೀರ್ ಅಹ್ಮದ್ ಮೂಲಕ ಮಾಡಿದ್ದಾರೆ. ರೈತರ ಹಾಗೂ ಹಿಂದೂಗಳ ಒಂದಿಂಚೂ ಜಾಗವನ್ನ ಕೂಡ ವಕ್ಫ್ ಗೆ ಬಿಟ್ಟು ಕೊಡಲ್ಲ. ಯಾವ ಹೋರಾಟಕ್ಕೂ ಸಿದ್ಧ, ಪ್ರಾಣತ್ಯಾಗಕ್ಕೂ ಸಿದ್ಧ ಪುತ್ತೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರಿನಲ್ಲಿ ಹೇಳಿಕೆ ನೀಡಿದ್ದಾರೆ.

Ad
Ad
Ad
Nk Channel Final 21 09 2023