Bengaluru 24°C
Ad

ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ: ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಎಸ್.ಜಿ.ಎಫ್.ಐಗೆ ಆಯ್ಕೆ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟವು ಸರಸ್ವತಿ ಶಿಶುಮಂದಿರ, ಮುಖರ್ಜಿನಗರ, ದೇವಸ್‌, ಮಧ್ಯಪ್ರದೇಶ ಇಲ್ಲಿ ನಡೆದಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ಭಾಗವಹಿಸಿ ತೃತೀಯ ತಂಡ ಪ್ರಶಸ್ತಿಯನ್ನು ಪಡೆದಿರುತ್ತದೆ.

ಪುತ್ತೂರು: ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟವು ಸರಸ್ವತಿ ಶಿಶುಮಂದಿರ, ಮುಖರ್ಜಿನಗರ, ದೇವಸ್‌, ಮಧ್ಯಪ್ರದೇಶ ಇಲ್ಲಿ ನಡೆದಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ಭಾಗವಹಿಸಿ ತೃತೀಯ ತಂಡ ಪ್ರಶಸ್ತಿಯನ್ನು ಪಡೆದಿರುತ್ತದೆ.

ದ್ವಿತೀಯ ಪಿಯುಸಿಯ ಅದ್ವೈತ್ ಶರ್ಮ ಮತ್ತು ದುರ್ಗೇಶ್‌ಮೌರ್ಯ.ಎಚ್ ಪ್ರಥಮ ಸ್ಥಾನ ಪಡೆದು ಎಸ್.ಜಿ.ಎಫ್.ಐ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಭಾಗವಹಿಸಿದ ಸೃಜನ್‌ಮತ್ತು ಸಂಪನ್ನಲಕ್ಷ್ಮಿ.ಕೆ ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಧೃತಿ ಪ್ರದೀಪ್‌ಪೂಜಾರಿ, ಸಾತ್ವಿ ಬಿ.ಕೆ , ತೃಪ್ತಿ ಎ.ಕೆ, ಪ್ರಾಪ್ತಿ ಶೆಟ್ಟಿ ಹಾಗೂ ರಾಮ್‌ಪ್ರಸಾದ್ ಇವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್‌, ಡಾ. ಜ್ಯೋತಿ ಮತ್ತು ಯತೀಶ್‌ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ.

Ad
Ad
Nk Channel Final 21 09 2023