ಮಂಗಳೂರು : ಸ್ಕೂಟರ್ ಸೀಟಿನ ಕೆಳಗೆ ಅಡಗಿಕೊಂಡಿದ್ದ ವಿಷಕಾರಿ ಹಾವು ಶುಕ್ರವಾರ ರಾತ್ರಿ ಕುಪ್ಪೆಪದವ್ ನಲ್ಲಿ ಸವಾರನನ್ನು ಕಚ್ಚಿದೆ. ಸವಾರನನ್ನು ಕುಪ್ಪೆಪದವ್ ನಲ್ಲಿ ಸೈಬರ್ ಸೆಂಟರ್ ನಡೆಸುತ್ತಿರುವ ಇಮ್ತಿಯಾಝ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಮ್ತಿಯಾಜ್ ಸೆಪ್ಟೆಂಬರ್ 27 ರ ರಾತ್ರಿ ತನ್ನ ಕೆಲಸವನ್ನು ಮುಗಿಸಿ ಮನೆಗೆ ಹೋಗುವ ಮೊದಲು ಮಸೀದಿಗೆ ಭೇಟಿ ನೀಡಿದ್ದರು. ಕೆಲವು ದಾಖಲೆಗಳನ್ನು ಇಡಲು ಅವರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ನ ಸೀಟನ್ನು ತೆರೆದಾಗ, ಕೆಳಗೆ ಅಡಗಿದ್ದ ಹಾವು ಅವರ ಬೆರಳನ್ನು ಕಚ್ಚಿತು. ತಕ್ಷಣ ಇಮ್ತಿಯಾಝ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
Ad