ಮಂಗಳೂರು: ಯಾವುದೇ ಭೇದವಿಲ್ಲದೆ ಸಾಮರಸ್ಯದಿಂದ ಆಚರಿಸುವ ಗಣೇಶ ಚತುರ್ಥಿ ಹಬ್ಬಕ್ಕೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆದರೆ ಕಡಲನಗರಿ ಮಂಗಳೂರಿನಲ್ಲಿ ವಿಘ್ನ ವಿನಾಯಕನ ಹಬ್ಬ ಆಚರಣೆಗೆ ಈಗ ವಿಘ್ನವೊಂದು ಎದುರಾಗಿದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಚಿತ್ರ ವಿಚಿತ್ರ ನೀತಿ ನಿಯಮ ಹೇರುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ.
ರಾಜ್ಯ ಸರಕಾರ ವಿಘ್ನ ವಿನಾಯಕನಿಗೆ ಈಗ ವಿಘ್ನ ತಂದಿರಿಸಿದೆ. ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಿದರೆ ಚಿತ್ರವಿಚಿತ್ರ ನಿಯಮ ಹೇರಲಾಗುತ್ತಿದೆ. ಆಯೋಜಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ, ಅತಿಥಿಗಳ ಹೆಸರು, ಮೊಬೈಲ್ ಸಂಖ್ಯೆ ನೀಡಲು ಹೇಳಲಾಗುತ್ತಿದೆ. ಅವರ ವಿಳಾಸ ನೀಡಬೇಕು, ಭಾಗವಹಿಸುವ ಟ್ಯಾಬ್ಲೊಗಳ ತಂಡ ಯಾವುದು? ಸೂಚಿಸಬೇಕು. ಯಾವ ವಾಹನದಲ್ಲಿ ಬರುತ್ತಾರೆ? ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು ಎಂದು ಅರ್ಥ ವಿಲ್ಲದ ಸೂಚನೆಗಳನ್ನು ಸರ್ಕಾರ ನೀಡುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಕಾಂಗ್ರೆಸ್ಸಿಗರಿಗೆ ಗಣೇಶನ ಮೇಲೆ, ಹಿಂದೂ ಹಬ್ಬಗಳ ಮೇಲೆ ಯಾಕಿಷ್ಟು ಕೋಪ? ಕೂಡಲೇ ಇದನ್ನೆಲ್ಲ ಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಬೇಕು ಎಂದು ಮಂಗಳೂರಿನಲ್ಲಿ ವೇದವ್ಯಾಸ್ ಕಾಮತ್ ಒತ್ತಾಯಿಸಿದ್ದಾರೆ.
ಇನ್ನು ನಗರದ ಹಂಪನ್ ಕಟ್ಟೆಯಲ್ಲಿ ಬ್ಯಾರಿಕೇಡ್ ಅಳವಡಿಕೆ ವಿಚಾರವಾಗಿ ಮಾತನಾಡಿದ ಅವರು, ಜನ ಸಾಮಾನ್ಯರು ಪರದಾಟ ಮಾಡುವಂತೆ ಆಗಿದೆ. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೂ ತರದೆ ತಮಗೆ ಬೇಕಾದಾಗೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ಆದೇಶ ಇದೆ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳು ಈ ನಿಯಮ ತಂದಿದ್ದಾರೆ ಎನ್ನುತ್ತಾರೆ.
ಟ್ರಾಫಿಕ್ ಮ್ಯಾನೆಜ್‌ಮೆಂಟ್ ಮಾಡುವುದು ಜಿಲ್ಲಾಡಳಿತ ಆದ್ರೆ ಜನ ಪ್ರತಿನಿಧಿಗಳು, ಜನ್ರಿಗೆ ಅರಿವು ಮೂಡಿಸಿ ಗಮನಕ್ಕೆ ತಂದು ಈ ಕ್ರಮ ಕೈಗೊಳ್ಳಬೇಕು. ಏಕಾಏಕಿ ನಿಮಗೆ ಖುಷಿ ಬಂದಂತೆ ಮಾಡುವ ಬದಲು ಜನ್ರ ಅಭಿಪ್ರಾಯ ಕೇಳಿ. ಬ್ಯಾರಿಕೇಡ್ ದಾಟಿ ಜನ್ರಿಗೆ ಏನಾದರೂ ಅನಾಹುತ ಆದ್ರೆ ಹೊಣೆ ಯಾರು. ಇದ್ರ ಹೊಣೆ ಜಿಲ್ಲಾಡಳಿತ ಹೊರುತ್ತಾ….?
ಕಾಂಗ್ರೆಸ್ ನಾಯಕರು ಉಸ್ತುವಾರಿ ಹೇಳಿದ್ರು ಎಂದು ಏಕಾಏಕಿ ತೆರವು ಮಾಡಿದ್ರೆ ಹೇಗೆ…?ಹಂಪನ್ ಕಟ್ಟೆಯಲ್ಲಿರುವಬಸ್ ನಿಲ್ದಾಣ ತೆರವು ವಿಚಾರ.ಜನ್ರು ಮಳೆಯಲ್ಲಿ ಬಿಸಿಲಲ್ಲಿ ನಿಲ್ಲುವಂತಾಗಿದೆ. ಒಮ್ಮೆ ಪಾಲಿಕೆ ಬಸ್ ನಿಲ್ದಾಣ ಮಾಡಿದ್ದು ಇದೀಗಾ ಯಾರಿಗೂ ತಿಳಿಸಿದೆ ಬಸ್ ನಿಲ್ದಾಣ ತೆರವು. ಈ ಭಾಗದಲ್ಲಿರುವ ಒಂದು ಮಳಿಗೆ ವ್ಯಾಪಾರಕ್ಕೆ ತೊಂದರೆ ಆಗುತ್ತೆ ಎಂದು ಬಸ್ ನಿಲ್ದಾಣ ತೆರವು ಮಾಡಿದ್ದಾರೆ. ಖಾಸಗಿ ಉದ್ಯಮಕ್ಕಾಗಿ ಸರ್ಕಾರದ ಬಸ್ ನಿಲ್ದಾಣ ತೆರವು ಎಷ್ಟು ಸರಿ..? ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದ್ದಾರೆ.