ಮಂಗಳೂರು: ಪರಿಸರದಲ್ಲಿ ಮಂಗಳವಾರ ಮುಂಜಾನೆ ಮಬ್ಬು ಕವಿದ ವಾತಾವರಣದಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವುಂಟಾಗಿದೆ. ಮುಂಜಾನೆ ದಮಾಮ್‌ನಿಂದ ಆಗಮಿಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ನಿಲ್ದಾಣ ಪರಿಸರದಲ್ಲಿ ಮಬ್ಬು ಕವಿದ ವಾತಾವರಣದಿಂದಾಗಿ ಆಗಸದಲ್ಲಿ ಹಲವಾರು ಸುತ್ತು ಹಾರಾಟ ನಡೆಸಿ ಬಳಿಕ ಕಣ್ಣೂರು ವಿಮಾನ ನಿಲ್ದಾಣಕ್ಕೆ ತೆರಳಿದೆ.
Ad
ಮುಂಜಾನೆ ಆಗಮಿಸಿದ ಬೆಂಗಳೂರು, ಹೈದರಾಬಾದ್ ಇಂಡಿಗೋ ವಿಮಾನ ಇಲ್ಲಿ ಇಳಿಯದೇ ಬೆಂಗಳೂರಿಗೆ ತೆರಳಿದೆ. ಅದು ಬೆಳಗ್ಗೆ 9.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಮುಂಬಯಿಯಿಂದ ಮುಂಜಾನೆ ಆಗಮಿಸಬೇಕಾಗಿದ್ದ ಏರ್ ಇಂಡಿಯಾ ವಿಮಾನ ಮಧ್ಯಾಹ್ನ ಆಗಮಿಸಿದೆ.
Ad
Ad