Bengaluru 30°C

ಬೆಂಗಳೂರು-ಮಂಗಳೂರು ನಡುವೆ ಆ.8ರ ವರೆಗೆ ರೈಲು ಸಂಚಾರ ರದ್ದು

Mng (1)

ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಮಳೆಯಾಗುತ್ತಿರುವ ಪರಿಣಾಮ ಭೂಕುಸಿತ ಉಂಟಾಗಿ ಎಡಕುಮರಿ- ಕಡಗವಳ್ಳಿ ರೈಲ್ವೆ ಮಾರ್ಗ ದುರಸ್ತಿ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಆ. 8ರವರೆಗೆ 12 ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.


ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಎಡಕುಮರಿ ಕಡಗವಳ್ಳಿ ರೈಲ್ವೆ ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದರಿಂದ ಬೆಂಗಳೂರು- ಮಂಗಳೂರು ಮಧ್ಯೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು.


ಈ ಮಾರ್ಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಅದು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಆ.8ರವರೆಗೆ 12 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಕೆಎಸ್‌‍ಆರ್‌ ಬೆಂಗಳೂರು- ಕಾರವಾರ ಎಕ್ಸ್ ಪ್ರೆಸ್‌‍ ರೈಲು ಸಂಚಾರ ಆ.7ರವರೆಗೆ ರದ್ದಾಗಲಿದೆ.


ಕಾರವಾರ ಕೆಎಸ್‌‍ಆರ್‌ ಬೆಂಗಳೂರು ಎಕ್ಸ್ ಪ್ರೆಸ್‌‍- ಕಾರವಾರ ಮಡಗಾಂವ್‌, ಮಡಗಾಂವ್‌- ಕಾರವಾರ ವಿಶೇಷ ರೈಲಿನ ಸಂಚಾರವನ್ನು ಆ.8ರ ವರೆಗೆ ರದ್ದು ಮಾಡಲಾಗಿದೆ. ಸರ್‌.ಎಂ. ವಿಶ್ವೇಶ್ವರಯ್ಯ- ಮುರ್ಡೇಶ್ವರ ಎಕ್ಸ್ ಪ್ರೆಸ್‌‍, ಯಶವಂತಪುರ- ಕಾರವಾರ ಎಕ್ಸ್ ಪ್ರೆಸ್‌‍ ರೈಲುಗಳ ಸಂಚಾರವನ್ನು ಆ. 8ರವರೆಗೆ ಸಂಪೂರ್ಣವಾಗಿ ರದ್ದು ಮಾಡಲಾಗಿದೆ.


Nk Channel Final 21 09 2023