Bengaluru 22°C
Ad

ತಿರುಪತಿ ಲಡ್ಡು ವಿವಾದ : ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿ

ತಿರುಪತಿ ಲಡ್ಡು ವಿವಾದ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಧರ್ಮಾಗ್ರಹ ಸಭೆಯ ಬಳಿಕ ಮಾತನಾಡಿದ ಅವರು, ತಿರುಪತಿ ಲಡ್ಡು ವಿವಾದ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಧರ್ಮಾಗ್ರಹ ಸಭೆಯ ಬಳಿಕ ಮಾತನಾಡಿದ ಅವರು, ತಿರುಪತಿ ದೇವಸ್ಥಾನವನ್ನ ನಮಗೆ ಬಿಟ್ಟುಕೊಡಿ, ಎಲ್ಲಾ ದೇವಸ್ಥಾನಗಳನ್ನ ಹಿಂದುಗಳಿಗೆ ಬಿಟ್ಟು ಕೊಡಬೇಕು ಎಂದಿದ್ದಾರೆ.

ಮಂಗಳೂರು:  ತಿರುಪತಿ ಲಡ್ಡು ವಿವಾದ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಧರ್ಮಾಗ್ರಹ ಸಭೆಯ ಬಳಿಕ ಮಾತನಾಡಿದ ಅವರು, ತಿರುಪತಿ ಲಡ್ಡು ವಿವಾದ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಧರ್ಮಾಗ್ರಹ ಸಭೆಯ ಬಳಿಕ ಮಾತನಾಡಿದ ಅವರು, ತಿರುಪತಿ ದೇವಸ್ಥಾನವನ್ನ ನಮಗೆ ಬಿಟ್ಟುಕೊಡಿ, ಎಲ್ಲಾ ದೇವಸ್ಥಾನಗಳನ್ನ ಹಿಂದುಗಳಿಗೆ ಬಿಟ್ಟು ಕೊಡಬೇಕು ಎಂದಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ದೇವಸ್ಥಾನದ ನಿರ್ವಹಣೆ ಮಾಡಿದ್ದರು. ಬ್ರಿಟಿಷ್ ಸರಕಾರ ದೇವಾಲಯದ ಸಂಪತ್ತನ್ನ ಕೊಳ್ಳೆ ಹೊಡೆಯಲು ಸರಕಾರದ ಅಧೀನಕ್ಕೆ ತಂದಿತ್ತು.ಮುಸಲ್ಮಾನರಿಗೆ ಮಸೀದಿ ನಡೆಸಲು ಹಾಗೂ ಕ್ರೈಸ್ತರಿಗೆ ಚರ್ಚ್ ನಡೆಸಲು ಅವರಿಗೆ ಅವಕಾಶ ನೀಡಿದ್ದಾರೆ. ಅದು ಒಳ್ಳೆ ಯದು ಅದಕ್ಕೆ ನಮ್ಮ ತಕರಾರರಿಲ್ಲಆದರೆ ಹಿಂದೂಗಳ ದೇವಸ್ಥಾನವನ್ನ ಸರಕಾರ ಯಾಕೆ ಅಧೀನಕ್ಕೆ ತೆಗೆದುಕೊಂಡಿದೆ.

ದೇವಸ್ಥಾನದ ಭೂಮಿಗಳನ್ನ ಕಬಳಿಸಿದ್ದೀರ ಭಕ್ತರು ಹಾಕಿದ ಕಾಣಿಕೆಯನ್ನ ನೀವು ತೆಗೆದುಕೊಂಡು ಹೋಗಿದ್ದೀರ, ಈಗ ನಮ್ಮ ದೇವಸ್ಥಾನದ ಪ್ರಸಾದಕ್ಕೂ ಕೈ ಹಾಕಿದ್ದೀರ..ಇದಕ್ಕಿಂತ ದೊಡ್ಡ ಅನ್ಯಾಯ ಅಪಮಾನ ಬೇರೇನಿದೆ? ಹಾಗಾಗಿ ತಿರುಪತಿ ದೇವಸ್ಥಾನವನ್ನ ನಮಗೆ ಬಿಟ್ಟುಕೊಡಿ. ಪ್ರಸ್ತುತ ಕರ್ನಾಟಕ ಸರಕಾರ ದೇವಾಲಯದ ಆಡಳಿತ ಮಂಡಳಿಯಲ್ಲಿ ಮುಸಲ್ಮಾನರನ್ನ ಸೇರಿಸುವ ಪ್ರಯತ್ನ ನಡೆಸುತ್ತಿದೆ ಅದು ಸರಕಾರದ ಹುಚ್ಚ ನಿರ್ಧಾರ. ಎಂದು ಕಿಡಿಕಾರಿದ್ದಾರೆ.

ಹಾಗಾದರೆ ಮಸೀದಿಯ ಆಡಳಿತ ಮಂಡಳಿಯಲ್ಲಿ ಹಿಂದುಗಳನ್ನ ಸೇರಿಸುತ್ತಿರಾ? ಕ್ರೈಸ್ತರ ಆಡಳಿತ ಮಂಡಳಿಯಲ್ಲಿ ಹಿಂದುಗಳನ್ನ ಸೇರಿಸುತ್ತೀರ? ಯಾರಿಗೆ ದೇವರ ಮೇಲೆ ಭಕ್ತಿ ಇಲ್ಲವೊ ಅಂತವರನ್ನು ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸೇರಿಸೋದು ದೇವಸ್ಥಾನಕ್ಕೆ ನಷ್ಟ. ಹಿಂದೂ ದೇವಾಲಯವನ್ನ ಹಿಂದೂಗಳಿಗೆ ಬಿಟ್ಟು ಕೊಡಲು ಅಗ್ರಹಪೂರ್ವಕವಾಗಿ ಒತ್ತಾಯಿಸುತ್ತಿದ್ದೇನೆ. ಸರಕಾರ ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಬೀದಿ ಗಿಳಿದು ಹೋರಾಟ ನಡೆಸುತ್ತೇವೆ. ದೇವಸ್ಥಾನದ ಹುಂಡಿಗೆ ಹಾಕಿದ ದುಡ್ಡನ್ನ ಸರಕಾರ ಅಹಿಂದೂಗಳಿಗಾಗಿ ಉಪಯೋಗಿಸುತ್ತಿದೆ ಎಂದರು.

ಹಿಂದೂಗಳ ಒಗ್ಗಟ್ಟಾಗಿದ್ದಾರೆ ಎಂದು ತೋರಿಸಬೇಕಾದರೆ ಹೋರಾಟಗಳು ನಡೆಯಬೇಕು. ಯಾವ ರೀತಿಯಲ್ಲೂ ಹೋರಾಟ ಮಾಡಬಹುದು ಆದರೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು.  ಹಿಂದೂಗಳ ದೇವಸ್ಥಾನ ಹಿಂದುಗಳ ಹಕ್ಕುಗಳ ರಕ್ಷಣೆಗೆ ಪ್ರತ್ಯೇಕ ಸನಾತನ ಹಿಂದೂ ರಕ್ಷಣಾ ವೇದಿಕೆಯ ಅಗತ್ಯವಿದೆ. ಹಿಂದೂ ಸಮಾಜಕ್ಕೆ ಅನುಕೂಲವಾಗುವ ರೀತಿಯಲ್ಲಿ ಪ್ರತ್ಯೇಕ ಬೋರ್ಡ್ ರಚನೆಯಾಗಬೇಕು, ಅದು ಭಕ್ತರಿಂದಲೇ ಆಗಬೇಕು ಯಾವ ರಾಜಕಾರಣಿಗಳು ಬೇಡ ಚಂದ್ರು ಬಾಬು ನಾಯ್ದು, ಸಿದ್ದರಾಮಯ್ಯ, ಜಗನ್ ಯಾರೂ ಬೇಡ ಎಂದು ಕಿಡಿಕಾರಿದ್ದಾರೆ.

Ad
Ad
Nk Channel Final 21 09 2023