ದಕ್ಷಿಣ ಕನ್ನಡ: ಬೆಳೆಯಲಾದ ನಾಟಿ ಬಿತ್ತನೆ ಮಾಡಲಾಗಿದ್ದ ಭತ್ತದ ಕಟಾವು ಕಾರ್ಯ ಮಂಗಳೂರು ಸಹಿತ ಮೂಡುಬಿದಿರೆ, ಮೂಲ್ಕಿ ಹಾಗೂ ಉಳ್ಳಾಲ ತಾಲೂಕಿನಲ್ಲಿ ಆರಂಭವಾಗಿದೆ. ಪ್ರಸ್ತುತ ಶೇ. 35- 40 ಕಟಾವು ಕಾರ್ಯ ಪೂರ್ಣಗೊಂಡಿದ್ದು, ವಿವಿಧೆಡೆ ಕಟಾವು ಕಾರ್ಯ ಮುಂದುವರಿದಿದೆ.
Ad
ಈ ಬಾರಿ ಮುಂಗಾರು ಮಳೆ ಸ್ವಲ್ಪ ತಡವಾಗಿ ಸುರಿದ ಹಿನ್ನೆಲೆಯಲ್ಲಿ ಭತ್ತ ಬೇಸಾಯವೂ ತಡ ವಾಗಿದ್ದು, ಇದರಿಂದ ಕಟಾವು ಕೂಡ ಒಂದು ತಿಂಗಳಷ್ಟು ವಿಳಂಬವಾಗಿತ್ತು. ಈ ಬಾರಿ ಫಸಲು ಬಹುತೇಕ ಉತ್ತಮವಾಗಿ ಬಂದಿದೆ. ವಾರದ ಹಿಂದೆ ಚಂಡ ಮಾರುತದ ಕಾರಣದಿಂದ ಸುರಿದ ಮಳೆಗೆ ಭತ್ತದ ಗದ್ದೆಯಲ್ಲಿ ನೀರು ನಿಂತು ಹಾನಿ ಸಂಭವಿಸಿತ್ತು. ಕಟಾವು ಆರಂಭ ಮಾಡುವ ಸಿದ್ಧತೆಯಲ್ಲಿದ್ದವರು ತುಸು ಕಷ್ಟ ಅನುಭವಿಸಿದರು.
Ad
Ad