Bengaluru 29°C

ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ) 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷ ಸಂಭ್ರಮ

ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ), ಬೆಂಗಳೂರು ಅರ್ಪಿಸುವ 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷದ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಗರದ ನಯನ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು: ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ), ಬೆಂಗಳೂರು ಅರ್ಪಿಸುವ 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷದ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಗರದ ನಯನ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ ಇದು14ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಇದನ್ನು ಕಾರ್ಯಕ್ರಮ ನಿರ್ವಾಹಕರು ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಪ್ರತಿಭಾ ಪ್ರದರ್ಶನ ನೀಡುತ್ತಿದ್ದಾರೆ.


ಕಳೆದ ನಾಲ್ಕು ವರ್ಷಗಳಿಂದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಗೌರವ ಸೂಚಿಸುವ ಕೆಲಸವನ್ನು ಇದು ನಿಮ್ಮ ವಾಹಿನಿ ಕಲಾ ವೇದಿಕೆ ಮಾಡಿಕೊಂಡು ಬರುತ್ತಿದೆ. ಇದು ಹಾಗೇ ಮುಂದುವರಿಯಲಿ, ವೇದಿಕೆಗೆ ನನ್ನ ಸಹಕಾರ ಪ್ರೋತ್ಸಾಹ ಸಹ ಇರುತ್ತದೆ ಎಂದು ಅವರು ಹೇಳಿದರು.


ಬೆಳಿಗ್ಗೆ ಹತ್ತರಿಂದ ರಾತ್ರಿ ಎಂಟರವರೆಗೆ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು.


ಅನ್ಮೂಲ್ ವಿಜಯ್ ಭಟ್ಕಳ್, ಡಾ. ಮೋನಿಷಾ ನವೀನ್, ಭಜರಂಗಿ ಚೇತನ್ ರಾಜ್, ಚಂದ್ರಶೇಖರ ಜಿ. , ಅಂಕಿತಾ ಜೈರಾಮ್, ಸುಕೃತಿ ಎಂ.ಎಸ್., ಸೆಲ್ವಕುಮಾರ್, ವರ್ಷಿಣಿ, ಲಿಖಿತ್ ಎನ್. ಜಾಲಿ ಜಾಲಿ ಜ್ಯಾಕ್, ಚಂದ್ರಿಕಾ ಬಿ.ವಿ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಈ ಕಾರ್ಯಕ್ರಮದಲ್ಲಿ ಹನ್ನೆರಡಕ್ಕೂ ಹೆಚ್ಚು ಭರತನಾಟ್ಯ, ಕೂಚುಪುಡಿ, ಕಥಕ್, ಹಿಪ್ ಹಾಪ್ ಡ್ಯಾನ್ಸ್, ವೆಸ್ಟರ್ನ್ ಡ್ಯಾನ್ಸ್, ಮೊದಲಾದ ವೈವಿದ್ಯಮಯ ಕಾರ್ಯಕ್ರಮ ನಡೆಯಿತು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ) ಪ್ರಧಾನ ಕಾರ್ಯದರ್ಶಿ ಆಗಿರುವ ಕಿಶೋರ್ ಕುಮಾರ್ ಕೆ.ಎಸ್. ಉಪಸ್ಥಿತರಿದ್ದರು.


Nk Channel Final 21 09 2023