ಮಂಗಳೂರು: ನಗರದ ಹೊರವಲಯದ ವಾಮಂಜೂರಿನಲ್ಲಿ ನ ಸೆಕೆಂಡ್ ಹ್ಯಾಂಡ್ ಬಜಾರ್ ನಲ್ಲಿ ಜ.೬ರಂದು ಮಿಸ್ ಫೈಯರ್ ನಡೆದಿದ್ದು, ಟೇಬಲ್ ಮೇಲಿದ್ದ ರಿವಾಲ್ವರ್ ಆಟದ ಸಾಮಾನೆಂದು ಭಾವಿಸಿ ಶೂಟ್ ಮಾಡಲಾಗಿದೆ.
ಘಟನೆಯಲ್ಲಿ ಸಫ್ವಾನ್ ಎಂಬವರಿಗೆ ಗಾಯವಾಗಿದ್ದು, ತನ್ನ ಹೊಟ್ಟೆಗೆ ರಿವಾಲ್ವರ್ ಇಟ್ಟು ಸಫ್ವಾನ್ ಫೈಯರ್ ಮಾಡಿಕೊಂಡಿದ್ದಾರೆ. ಪಡೀಲ್ ನ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಕೆಂಡ್ ಹ್ಯಾಂಡ್ ಬಜಾರ್ ಗೆ ಖರೀದಿಗೆ ಸಫ್ವಾನ್ ಬಂದಿದ್ದರು. ಭಾಸ್ಕರ್ ಎಂಬವರು ಟೇಬಲ್ ಮೇಲೆ ರಿವಾಲ್ವರ್ ಇಟ್ಟು ಹೋಗಿದ್ದರು.