ಪುತ್ತೂರು : ಬಾಲಕಿಯರ ಹಾಸ್ಟೆಲ್ ಒಳಗೆ ಆಗಂತುಕ ನುಗ್ಗಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಡೀಲ್ ನಲ್ಲಿರುವ ಹಾಸ್ಟೆಲ್ ನವೆಂಬರ್ 6 ರಂದು ನಡೆದಿದೆ. ಸಿಸಿ ಕ್ಯಾಮಾರಾದಲ್ಲಿ ಆಗಂತುಕನ ಚಲನವಲನ ದಾಖಲಾಗಿದೆ. ರಾತ್ರಿ ಸುಮಾರು 2.30 ರಿಂದ 3.30 ರ ವರೆಗೆ ಆಗಂತುಕ ಹಾಸ್ಟೆಲ್ ಒಳಗೇ ಇದ್ದನು.
Ad
ಆಗಂತುಕನ ಚಲನವಲನವನ್ನು ಬಾಲಕಿಯೋರ್ವಳು ವಿಡಿಯೋ ಮಾಡಿದ್ದಳು. ಆ ಬಳಿಕ ಹಾಸ್ಟೆಲ್ ನ ಮೇಲ್ವಿಚಾರಕಿಗೆ ಬಾಲಕಿ ಮಾಹಿತಿ ನೀಡಿದಳು. ಹಾಸ್ಟೆಲ್ ಸಿಸಿ ಕ್ಯಾಮಾರಾ ಪರಿಶೀಲಿಸಿ ಹಾಸ್ಟೆಲ್ ವಾರ್ಡನ್ ಪೊಲೀಸರಿಗೆ ದೂರು ನೀಡಿದರು.
Ad
ಪ್ರಕರಣ ದಾಖಲಿಸಲು ಪುತ್ತೂರು ಮಹಿಳಾ ಠಾಣೆ ಪೊಲೀಸರು ಉದಾಸೀನತೆ ತೋರಿದ್ದರು. ಉನ್ನತ ಅಧಿಕಾರಿಗಳ ಸೂಚನೆ ಬಳಿಕ ನ.10 ರಂದು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಭೀರರ ಪ್ರಕರಣವನ್ನು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ.
Ad
Ad