ಮಂಗಳೂರು: ಜನಸೇವಾ ಕಾರ್ಯವನ್ನು ತನ್ನ ಸುತ್ತಮುತ್ತಲ ಗ್ರಾಮಕ್ಕೆ ನಿರಂತರ ಸಮಾಜ ಸೇವಾ ಕಾರ್ಯ ನೀಡುತ್ತಿರುವ ಬಜಾಲ್ ಗ್ರಾಮದ ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರದ ನಿಯೋಗ ತೆರಳಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂತ್ರಿಗಳಾದ ಮಾನ್ಯ ದಿನೇಶ್ ಗುಂಡೂರಾವ್ ಅವರ ಸನ್ನಿದಾನದಲ್ಲಿ ಕೆಲವು ಬೇಡಿಕೆಗಳನ್ನು ಮಂಡಿಸಿತು.
ಪ್ರಾಮುಖ್ಯವಾಗಿ ನಗರಪಾಲಿಕಾ ವ್ಯಾಪ್ತಿಯಲ್ಲಿ ಬರುವ ಜಲ್ಲಿಗುಡ್ಡೆ ಪ್ರದೇಶಕ್ಕೆ ಹೊಂದಿಕೊಂಡಂತೆ ಕರ್ಮಾರ್ ನಿಂದ ಜಲ್ಲಿಗುಡ್ಡೆ ಯವರೆಗಿನ ರಸ್ತೆ ಅಗಲೀಕರಣವಾಗಲೀ, ಒಳಚರಂಡಿ ವ್ಯವಸ್ಥೆಯಾಗಲೀ, ನೀರು ಸಾಗಿ ಹೋಗಲು ಚರಂಡಿ ವ್ಯವಸ್ಥೆ ಯಾಗಲೀ, ಪಾದಾಚಾರಿಗಳಿಗೆ ನಡೆಯಲು ಫುಟ್ ಪಾತ್ ವ್ಯವಸ್ಥೆ ಯಾಗಲೀ ,ರಸ್ತೆ ಕಾಂಕ್ರೀಟೀಕರಣವಾಗಲೀ ಯಾವುದೂ ನಡೆದಿಲ್ಲ. ಪಡೀಲ್ ನಿಂದ ಕರ್ಮಾರ್ ವರೆಗೆ ಹತ್ತು ತಿಂಗಳ ಹಿಂದೆ ಕಾಂಕ್ರೀಟೀಕರಣವಾದ ನಂತರ ಅದಕ್ಕೇ ಹೊಂದಿಕೊಂಡ ಜಲ್ಲಿಗುಡ್ಡೆ ರಸ್ತೆಗೆ ಕಾಂಕ್ರೀಟ್ ಕೆಲಸ ಮಾಡದೆ ಅರ್ಧಕ್ಕೆ ಕೆಲಸ ಸ್ತಗಿತಗೊಳಿಸಿದ್ದಾರೆ . ಊರಿನ ರಸ್ತೆಗೆ ಕಾಂಕ್ರೀಟ್ ಹಾಕುತ್ತಾರೆ ಎಂಬ ಪರಿಸರದ ಜನರ ಆಸೆ ಕಳೆದೊಂದು ವರ್ಷ ದಿಂದ ಕಮರಿ ಹೋಗಿದೆ..ಆ ರಸ್ತೆಯಲ್ಲಿ ಬಸ್,ಕಾರು,ದ್ವಿಚಕ್ರ ವಾಹನ ಸಾಗಲು ಒಂದೇ ವಾಹನ ಚಲಿಸುವ ರಸ್ತೆ ಇರುವುದರಿಂದ ಸಾರ್ವಜನಿಕರು ಅವಘಡ ಹಾಗೂ ತೊಂದರೆ ಅನುಭವಿಸುವಂತಾಗಿದೆ.
ಕೂಡಲೇ ತಾವು ಈ ಕಾರ್ಯಕ್ಕೆ ಕೈ ಜೋಡಿಸಬೇಕಾಗಿ ವಿನಂತಿಸಿದ್ದು ,ಮೇಲಿನ ವಿಷಯವನ್ನು ಪರಿಗಣಿಸಿ ಕೋರಿಕೆ ಈಡೇರಿಸುವ ಪ್ರಯತ್ನ ಮಾಡುತ್ತಾರೆಂಬ ಭರವಸೆಯೊಂದಿಗೆ ಈ ಮನವಿ ನೀಡಲಾಯಿತು. ಮೇಲಿನ ವಿಷಯಕ್ಕೆ ಸಂಬಂದಿಸಿ ಕೂಡಲೇ ಸಮಸ್ಯೆಯನ್ನು ಸ್ಥಳೀಯ ಜನಪ್ರತಿನಿದಿಗಳು ಕೂಡಾ ಬಗೆಹರಿಸಬೇಕಿದೆ.
ಈ ಸಂಧರ್ಭದಲ್ಲಿ ಗೌರವಾಧ್ಯಕ್ಷ ಲಯನ್ ಬಿ. ಪ್ರಕಾಶ್ ಪೈ., ಅಧ್ಯಕ್ಷ ಅಶೋಕ್ ಜಾಧವ್, ಉಪಾಧ್ಯಕ್ಷೆ ಉಷಾ, ಶೈಕ್ಷಣಿಕ ಕಾರ್ಯದರ್ಶಿ ಆನಂದ ರಾವ್, ಲೆಕ್ಕ ಪರಿಶೋಧಕಿ ಸುಮಲತಾಹರೀಶ್, ಸಮಾಜ ಸೇವಾ ಕಾರ್ಯದರ್ಶಿ ಶೋಭಾಹರೀಶ್, ವಿದ್ಯಾ ಕೆ. ಗಂಗಾಧರ್ , ದಾಕ್ಷಾಯಿಣಿ ಹಾಗೂ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಸಿ. ಹರಿಶ್ಚಂದ್ರ ರಾವ್ ಮಾಹಿತಿ ವಿವರಿಸಿದರು.