Ad

ದೈವ ಕ್ಷೇತ್ರದಲ್ಲಿ ನಡೀತಾ ಮತ್ತೊಂದು ಪವಾಡ : ಇದ್ದಕ್ಕಿದ್ದಂತೆ ಅಟೋ ಸ್ಟಾರ್ಟ್ ಆಗಿ ಚಾಲನೆ.!

ದೈವ ಕ್ಷೇತ್ರದಲ್ಲಿ ನಡೀತಾ ಮತ್ತೊಂದು ಪವಾಡ ನಡೆದಿದ್ದು, ಲಾಕ್ ಮಾಡಿ ನಿಲ್ಲಿಸಿದ್ದ ಅಟೋ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಚಾಲನೆಗೊಂಡಿದೆ.

ಮಂಗಳೂರು: ದೈವ ಕ್ಷೇತ್ರದಲ್ಲಿ ನಡೀತಾ ಮತ್ತೊಂದು ಪವಾಡ ನಡೆದಿದ್ದು, ಲಾಕ್ ಮಾಡಿ ನಿಲ್ಲಿಸಿದ್ದ ಅಟೋ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಚಾಲನೆಗೊಂಡಿದೆ. ದೇವಸ್ಥಾನದ ಮುಂದೆ ಎಲೆಕ್ಟ್ರಿಕ್ ಆಟೋ ನಿಲ್ಲಿಸಿ ದೈವಸ್ಥಾನಕ್ಕೆ ಕೈ ಮುಗಿಯಲು ಹೋಗಿದ್ದ ಚಾಲಕ.ದೈವಸ್ಥಾನದ ಕೈ ಮುಗಿದು ವಾಪಸ್ ಬರುವಷ್ಟರಲ್ಲಿ ಆಟೋ ಇದ್ದಕ್ಕಿದ್ದಂತೆ ಚಾಲನೆಗೊಂಡಿರುವ ಘಟನೆ ಕಾರ್ಣಿಕ ಕ್ಷೇತ್ರ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತೆ ದೈವಸ್ಥಾನ ಎದುರು ನಡೆದಿದೆ.

Ad
300x250 2

ಇದ್ದಕಿದ್ದಂತೆ ಚಾಲನೆಗೊಂಡ ಆಟೋ ಅಲ್ಲೇ ಕೈಮುಯುತ್ತಿದ್ದವನ ಬೈಕ್ ಗೆ ಡಿಕ್ಕಿ ಹೊಡೆದಿದೆ.ನೋಡುನೋಡುತ್ತಿದ್ದಂತೆ ಚಲಿಸುವುದನ್ನು ಗಮನಿಸಿದ ಚಾಲಕ ಓಡಿಹೋಗಿ ಆಟೋ ನಿಲ್ಲಿಸಿದ್ದಾನೆ. ಜೂ.28 ರಂದು ಬೆಳಗ್ಗೆ 10:30 ಘಟನೆ ನಡೆದಿದೆ. ಇನ್ನು ಘಟನೆಯ ದೃಷ್ಯ ದೈವಸ್ಥಾನದ ಸಿಸಿಕ್ಯಾಮದಲ್ಲಿ ಸೆರೆಯಾಗಿದೆ.

ಐದು ವರ್ಷದ ಹಿಂದೆಯೂ ಇದೇ ಜಾಗದಲ್ಲಿ ಒಂದು ಪವಾಡ ನಡೆದಿತ್ತು.
ಉಡುಪಿ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸಾವಿನ ಪ್ರಕರಣದಲ್ಲಿ ಸ್ವಾಮೀಜಿ ಆಪ್ತೆ ರಮ್ಯ ಶೆಟ್ಟಿ ಅವರ ಸಾವಿಗೆ ಕಾರಣವಾಗಿದ್ದರು. ಈ ಸಂಬಂಧ ಆರೋಪಿ ರಮ್ಯಾ ಶೆಟ್ಟಿ ವಶಕ್ಕೆ ಪಡೆಯಲು ಪೊಲೀಸ್ ಪ್ರಯತ್ನಿಸಿತ್ತಿದ್ದರು ಈ ವೇಳೆ ಬುರ್ಖಾ ಧರಿಸಿ ಕಾರಿನಲ್ಲಿ ಪರಾರಿ ಆಗುತ್ತಿದ್ದ ರಮ್ಯ ಶೆಟ್ಟಿ ಇದೇ ದೈವಸ್ಥಾನದ ಮುಂದೆ ಕಾರು ಪಂಕ್ಚರ್ ಆಗಿತ್ತು.ಕ್ಷಿಪ್ರ ಕಾರ್ಯಾಚರಣೆ ಮೂಲಕ ಪೊಲೀಸರು ರಮ್ಯಾ ಶೆಟ್ಟಿ ವಶಕ್ಕೆ ಪಡೆದಿದ್ದರು.

Ad
Ad
Nk Channel Final 21 09 2023
Ad