ಮಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಧರ್ಮದ ವಿದ್ಯಾರ್ಥಿನಿಯೊಬ್ಬಳು ಕೇರಳದಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ವಿವಾಹವಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ವಿಸ್ಮಯ ಎನ್ನುವ ವಿದ್ಯಾರ್ಥಿನಿ ಕೇರಳದ ಅಶ್ಪಕ್ ಎನ್ನುವ ಯುವಕನ ಜತೆ ಮದುವೆಯಾಗಿದ್ದಾಳೆ. ಈ ಪ್ರಸಂಗ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದು, ವಿವಾಹಕ್ಕೆ ಕೋರ್ಟ್ ಅನುಮತಿ ನೀಡಿದೆ.
ವಿದ್ಯಾರ್ಥಿನಿ ವಿಸ್ಮಯಳನ್ನು ಜೂ.30ರಂದು ಉಳ್ಳಾಲದಿಂದ ಕಾಸರಗೋಡು ವಿದ್ಯಾನಗರ ನಿವಾಸಿ ಮುಹಮ್ಮದ್ ಅಶ್ಫಕ್ ಅಪಹರಿಸಿದ್ದ ಬಗ್ಗೆ ವಿದ್ಯಾರ್ಥಿನಿಯ ತಂದೆ ವಿನೋದ್ ಅವರು ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಮಗಳನ್ನು ಮತಾಂತರಗೊಳಿಸುವುದಕ್ಕಾಗಿ ಅಶ್ಪಕ್ ಮತ್ತು ಆತನ ತಂಡ ಅಪಹರಣ ನಡೆಸಿದೆ ಎಂದು ದೂರಿನಲ್ಲಿ ಹೇಳಿದ್ದರು. ಇದೀಗ ಅನ್ಯ ಧರ್ಮದ ಯುವಕನ ಜತೆ ವಿವಾಹ.
Ad