Bengaluru 23°C
Ad

ಅತ್ಯಾದ್ಬುತ ಕಲಾವಿದನ ಕುಂಚದಲ್ಲಿ ಮೂಡಿ ಬಂದ ಆದಿಯೋಗಿಯ ಸ್ತಬ್ಧಚಿತ್ರ

ಈ ಬಾರಿಯ ಮಂಗಳೂರು ದಸರಾ ಮೆರವಣಿಗೆಗೆ ವಿನೂತನ ಸ್ತಬ್ಧಚಿತ್ರ, ಆದಿಯೋಗಿಯ ವಿಗ್ರಹಕ್ಕೆ ಯುವ ಚಿತ್ರ ಕಲಾವಿದ ಬಂಟ್ವಾಳದ ಮನೋಜ್ ಕನಪಾಡಿ ಅವರಿಂದ ಅಂತಿಮ ಸ್ಪರ್ಶ.ಇದೇನಪ್ಪಾ ಹೊಸತು,ವಿಶೇಷ ಅಂತೀರಾ,ಹಾಗಾದರೆ ಈ ವರದಿ ನೋಡಿ ....

ಬಂಟ್ವಾಳ: ಈ ಬಾರಿಯ ಮಂಗಳೂರು ದಸರಾ ಮೆರವಣಿಗೆಗೆ ವಿನೂತನ ಸ್ತಬ್ಧಚಿತ್ರ, ಆದಿಯೋಗಿಯ ವಿಗ್ರಹಕ್ಕೆ ಯುವ ಚಿತ್ರ ಕಲಾವಿದ ಬಂಟ್ವಾಳದ ಮನೋಜ್ ಕನಪಾಡಿ ಅವರಿಂದ ಅಂತಿಮ ಸ್ಪರ್ಶ.ಇದೇನಪ್ಪಾ ಹೊಸತು,ವಿಶೇಷ ಅಂತೀರಾ,ಹಾಗಾದರೆ ಈ ವರದಿ ನೋಡಿ ….

ಮಂಗಳೂರು ದಸರಾ ಮೆರವಣಿಗೆಗೆ ಕೊಯಮುತ್ತೂರಿನಲ್ಲಿ ಈಶ ಫೌಂಡೇಷನ್ ಅವರ ನಿರ್ಮಾಣದ ಆದಿಯೋಗಿಯ ಪ್ರತಿಮೆಯ ಸ್ತಬ್ದಚಿತ್ರವನ್ನು ಸಿದ್ದಪಡಿಸಿಕೊಡುವಂತೆ ಮನೋಜ್ ಕನಪಾಡಿ ಅವರಲ್ಲಿ ಬೇಡಿಕೆಯನ್ನು ಮುಂದಿಟ್ಟ ಹಿನ್ನೆಲೆಯಲ್ಲಿ ಪೈಬರ್ ಕಲಾಕೃತಿಯೊಂದು ಸಿದ್ದವಾಗುತ್ತಿದ್ದು,ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಈ ಬಾರಿ ಮಂಗಳೂರು ದಸರಾ ಸೇರಿದಂತೆ ಹಲವು ಕಡೆಗಳ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಲಿರುವ ಆದಿಯೋಗಿ ಲೇಸರ್ ಶೋ ಪ್ರದರ್ಶನಕ್ಕೆ ಮೂರ್ತಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಮನೋಜ್ ಹಾಗೂ ಅವರ ತಂಡ ತೊಡಗಿಕೊಂಡಿದೆ. 2-3 ತಿಂಗಳ ಸತತ ಪರಿಶ್ರಮದ ಬಳಿಕ ಇಂತಹ ಮೂರ್ತಿಗಳು ಸಿದ್ದಗೊಳ್ಳಲಿದ್ದು, ಪ್ರಾರಂಭದಲ್ಲಿ ಆವೆ ಮಣ್ಣಿನಲ್ಲಿ ಮೂರ್ತಿಯನ್ನು ತಯಾರಿಸಿ ಬಳಿಕ ಅದರಿಂದ ಫೈಬರ್ ಮೋಲ್ಡ್ ಸಿದ್ಧಪಡಿಸುತ್ತಾರೆ. ಮುಂದೆ ಮೌಲ್ಡ್ ಮೂಲಕ ಎಷ್ಟು ಬೇಕಾದರೂ ಮೂರ್ತಿಗಳನ್ನು ಸಿದ್ಧಪಡಿಸಲು ಅನುಕೂಲವಾಗಲಿದೆ.

ಬಿಸಿರೋಡಿನ ಮಿನಿ ಉದ್ಯಾನವನ ಸೇರಿದಂತೆ ಅನೇಕ ದೊಡ್ಡ ದೊಡ್ಡ ಪಾರ್ಕ್ ಗಳಲ್ಲಿ ಮನೋಜ್ ಕನಪಾಡಿ ಅವರ ಕೈ ಯಿಂದ ಮೂಡಿ ಬಂದ ಕಲಾಕೃತಿಗಳು ವಿಶೇಷವಾಗಿ ಜನರ ಗಮನ ಸೆಳೆಯುತ್ತವೆ. ಇವರ ಕೈಯಲ್ಲಿ ಮೂಡಿ ಬಂದ ಕಲಾಕೃತಿಗಳು ಜೀವಂತವಾಗಿರುವ ಭಾವನೆಯನ್ನು ವ್ಯಕ್ತಪಡಿಸುವುದು ಇವರ ಕೈ ಚಳಕಕ್ಕೆ ಸಾಕ್ಷಿಯಾಗಿವೆ.

ದಸರಾ, ಗಣೇಶೋತ್ಸವ, ಶಾರದೋತ್ಸವ ಮೊದಲಾದ ಉತ್ಸವಗಳ ಮೆರವಣಿಗೆಯಲ್ಲಿ ನಾವು ಹತ್ತಾರು ಬಗೆಯ ಸ್ತಬ್ಧಚಿತ್ರಗಳನ್ನು ನೋಡಿ ಅವುಗಳ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಆದರೆ ಅವುಗಳ ಸಿದ್ದತೆಯಲ್ಲಿ ಕಲಾವಿದರ ಪರಿಶ್ರಮ ವಿಶೇಷವಾಗಿರುತ್ತದೆ.
ಕಳೆದ 20 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಕೊಂಡಿರುವ ಅವರು ವಿವಿಧ ರಸ್ತೆಗಳ ಸರ್ಕಲ್ ಗಳಿಗೆ ಮೂರ್ತಿ, ರೆಸಾರ್ಟ್, ಗಾರ್ಡನ್, ಹೊಟೇಲ್ ಗಳಿಗೆ ಬೇರೆಬೇರೆ ಶೈಲಿಯ ವಿಗ್ರಹಗಳನ್ನು ತಯಾರಿಸುವ ಅವರು, ವಿನೂತನ ಶೈಲಿಯ ಕಲಾಕೃತಿಗಳ ತಯಾರಿಯಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಈಗಾಗಲೇ ಕಂಬಳದ ಓಟದ ಕೋಣೆಗಳು, ಎತ್ತುಗಳ ಉಳುಮೆ ಮಾಡುವ ರೈತ, ಶ್ರೀಕೃಷ್ಣನ ಗೀತೋಪದೇಶ ಮೊದಲಾದ ನೂರಾರು
ಶೈಲಿಯ ರಚನೆಗಳನ್ನು ಮಾಡಿ ಅವರು ಶಹಭಾಷ್ ಎನಿಸಿಕೊಂಡಿದ್ದಾರೆ.

ಕೃಷಿ ಕುಟುಂಬದ ಯುವಕ ಕಲಾವಿದನಾದ ಬಗ್ಗೆ …

ಕಲಾವಿದ ಕುಟುಂಬದಿಂದ ಜನಿಸದಿದ್ದರೂ ಕೃಷಿ ಕುಟುಂಬದಲ್ಲಿ ಬೆಳೆದ ಬಂದ ಗ್ರಾಮೀಣ ಭಾಗದ ಯುವಕನ ಕೈಯಲ್ಲಿ ಮೂಡಿಬಂದ ಕಲಾಕೃತಿಗಳಿಗೆ ಬಹುಬೇಡಿಕೆಯಿದೆ. ಎಳೆವೆಯಲ್ಲಿಯೇ ಚಿತ್ರಗಾರನಾಗುವ ಕನಸು ಹೊಂದಿದ್ದ ಮನೋಜ್ ಅವದಿಗೆ ಪ್ರಾಥಮಿಕ ಶಾಲೆಯಲ್ಲಿ ಇವರ ಆಸಕ್ತಿ ಕ್ಷೇತ್ರವಾದ ಚಿತ್ರಕಲೆಯಲ್ಲಿ ಗಮನಸೆಳೆದಿದ್ದಾರೆ.

ಮಂಗಳೂರಿನ ಚಿತ್ರಕಲಾ ಶಾಲೆಯಲ್ಲಿ ಕೋರ್ಸ್ ಕಂಪ್ಲೀಟ್ ಮಾಡಿದ ಇವರು ಅ ಬಳಿಕ ಪ್ರತಿಷ್ಠಿತ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕೆಲಸ ಮಾಡಿದ ಅನುಭವಿ. ಬಳಿಕ ಕಲಾಸೇವೆಯಲ್ಲಿ ಸಾಧನೆ ಮಾಡಬೇಕು ಎಂಬ ಕನಸಿನೊಂದಿಗೆ ಬ್ರಹ್ಮರಕೋಟ್ಲು ಎಂಬಲ್ಲಿ ಬಾಡಿಗೆ ಕಟ್ಟಡದಲ್ಲಿ ಕಲಾಕೃತಿಗಳನ್ನು ತಯಾರಿಸುವ ಕಾಯಕವನ್ನು ಆರಂಭಿಸಿದ್ದಾರೆ.ಬೇಡಿಕೆಯಿದ್ದರೆ ಮಾತ್ರ ಕಲಾಕೃತಿಗಳು ತಯಾರಿಸುವ ಇವರು ಉಳಿದ ಸಮಯದಲ್ಲಿ ಇವರ ಆಸಕ್ತಿಯ ಕಲಾಕೃತಿಗಳನ್ನು ತಯಾರಿಸುವುದರಲ್ಲಿ ತೊಡಗಿಕೊಂಡಿರುತ್ತಾರೆ.

ಎಲ್ಲಾ ರಂಗದಲ್ಲೂ ಸೈ ಎನಿಸಿಕೊಂಡರೆ ಮಾತ್ರ ಓರ್ವ ಚಿತ್ರ ಕಲಾವಿದ ಯಶಸ್ವಿಯಾಗಲು ಸಾಧ್ಯ ಎಂದು ಮನೋಜ್ ಕನಪಾಡಿ ತಿಳಿಸಿದ್ದಾರೆ. ಕಲಾವಿದ ಇಂಜಿನಿಯರ್ ಕೂಡ ಆಗಿರಬೇಕು,ವೆಲ್ಲಿಂಗ್ ಕೆಲಸವು ಗೊತ್ತಿರಬೇಕು. ಎಲ್ಲಾ ಆಯಾಮಗಳಲ್ಲಿ ತೊಡಿಸಿಗೊಂಡು ಕರ್ತವ್ಯ ನಿರ್ವಹಿಸಿದರೆ ಮಾತ್ರ ಪರಿಪೂರ್ಣವಾದ ರೀತಿಯಲ್ಲಿ ಗುಣಮಟ್ಟದ ಕಲೆ ಮೂಡಿಬರಲು ಸಾಧ್ಯವಾಗುತ್ತದೆ ಎಂಬುದು ಅವರ ಮನದಾಳದ ಮಾತು ಆಗಿದೆ.

Ad
Ad
Nk Channel Final 21 09 2023