Bengaluru 24°C
Ad

ಮಂಗಳೂರು: ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ʼಸ್ತನ ಕ್ಷೇಮ ಕೇಂದ್ರʼ ಆರಂಭ

ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಹಾಸ್ಪಿಟಲ್ ಸ್ತನ ಕ್ಯಾನ್ಸರ್ ಜಾಗೃತಿ ಮಾಸವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ತನ ಕ್ಷೇಮ ಕೇಂದ್ರ(ಬ್ರೆಸ್ಟ್ ವೆಲ್‌ನೆಸ್ ಸೆಂಟರ್) ಆರಂಭಿಸಿದೆ.

ಮಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಹಾಸ್ಪಿಟಲ್ ಸ್ತನ ಕ್ಯಾನ್ಸರ್ ಜಾಗೃತಿ ಮಾಸವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ತನ ಕ್ಷೇಮ ಕೇಂದ್ರ(ಬ್ರೆಸ್ಟ್ ವೆಲ್‌ನೆಸ್ ಸೆಂಟರ್) ಆರಂಭಿಸಿದೆ. ಈ ಕೇಂದ್ರವು ಕೌಶಲ್ಯಪೂರ್ಣ ವೈದ್ಯರು, ಪೂರ್ಣಾವಧಿ ಕ್ಯಾನ್ಸರ್ ರೋಗ ತಜ್ಞರು ಮತ್ತು ಮಹಿಳಾ ಸ್ತನ ಶಸ್ತ್ರಕ್ರಿಯಾ ತಜ್ಞರು ಮತ್ತು ವಿಕಿರಣ ತಜ್ಞರನ್ನು ಹೊಂದಿರುತ್ತದೆ.

ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಕ್ಯಾನ್ಸರ್ ರೋಗಶಾಸ್ತ್ರ ತಜ್ಞರಾದ ಡಾ. ಸ್ಯಾನ್ಯೊ ಡಿ’ಸೋಜಾ ಅವರು ಭಾರತದಲ್ಲಿ ಅದರಲ್ಲಿಯೂ ನಿರ್ದಿಷ್ಟವಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರಲ್ಲದೆ, ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ.

ಪ್ರತಿವರ್ಷ ನಮ್ಮ ದೇಶದಲ್ಲಿ ಎರಡು ಲಕ್ಷ ನೂತನ ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತದೆ. ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಎಂದರೆ ಅದು ಸ್ತನ ಕ್ಯಾನ್ಸರ್ ಆಗಿರುತ್ತದೆ. ಜೊತೆಗೆ ಇದು ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ ಅತ್ಯಂತ ಸಾಮಾನ್ಯ ಕಾರಣವೂ ಆಗಿರುತ್ತದೆ. ಜಾಗೃತಿ ಶೀಘ್ರ ಪತ್ತೆ ಮತ್ತು ಚಿಕಿತ್ಸೆಯ ಲಭ್ಯತೆಗಳು ಬಹಳ ಮುಖ್ಯವಾಗಿರುತ್ತದೆ. ಜೊತೆಗೆ ಸ್ತನ ಕ್ಯಾನ್ಸರ್ ಚಿಕಿತ್ಸೆ ನೀಡಿ ಗುಣಪಡಿಸಬಹುದಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿರುತ್ತದೆ’’ ಎಂದರು.

ಹ (1)

ಕೆಎಂಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಹರೀಶ್ ಇ. ಅವರು ಮಾತನಾಡಿ, ಕೆಎಂಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆರೈಕೆಗೆ ಉತ್ಕೃಷ್ಟತಾ ಕೇಂದ್ರವು ಯಾವುದೇ ಹಂತದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಸಮಗ್ರ ಮಾರ್ಗವನ್ನು ಹೊಂದಿರುತ್ತದೆ ಎಂದರು.

ಕೆಎಂಸಿ ಆಸ್ಪತ್ರೆಯ ಕ್ಯಾನ್ಸರ್ ರೋಗ ಶಸ್ತ್ರ ಕ್ರಿಯಾ ತಜ್ಞರಾದ ಡಾ. ಕಾರ್ತಿಕ್ ಕೆಎಸ್ ಅವರು ಮಾತನಾಡಿ, ಶೀಘ್ರ ಪತ್ತೆ ಮಾಡುವುದು, ಜಾಗೃತಿ ಮತ್ತು ಚಿಕಿತ್ಸೆಯ ಲಭ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ನಿರ್ಣಾಯಕವಾಗಿವೆ. ಏಕಂದರೆ ಶೀಘ್ರವಾಗಿ ಪತ್ತೆ ಮಾಡಿದಲ್ಲಿ ಅತ್ಯಂತ ಹೆಚ್ಚು ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಒಂದಾಗಿದೆಎಂದರು.

ನೂತನ ಸ್ತನ ಕ್ಷೇಮ ಕೇಂದ್ರದ ಲೋಗೊವನ್ನು ಅನಾವರಣಗೊಳಿಸಿದ ನಂತರ ಕೆಎಂಸಿ ಆಸ್ಪತ್ರೆಯ ಸ್ತನ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬಸಿಲ ಅಲಿ ಅವರು ಕೇಂದ್ರದ ಅನನ್ಯತೆ ಕುರಿತು ಮಾತನಾಡಿ, ಸ್ತನ ಕ್ಷೇಮ ಕೇಂದ್ರವನ್ನು ಮಹಿಳೆಯರ ವಿಕಸನಗೊಳ್ಳುತ್ತಿರುವ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯ ಟವರ್ ಒನ್‌ನಲ್ಲಿನ 11ನೇ ಮಹಡಿಯಲ್ಲಿರುವ ಸ್ತನ ಕ್ಷೇಮ ಕೇಂದ್ರಕ್ಕೆ ರೋಗಿಗಳು ಭೇಟಿ ನೀಡಬಹುದು. ಅಥವ 1800 102 5555ಗೆ ಕರೆ ಮಾಡಿ ಅಪಾಯಿಂಟ್‌ಮೆಂಟ್‌ಗಳನ್ನು ಪಡೆದುಕೊಳ್ಳಬಹುದು’’ ಎಂದರು.

ನೂತನ ಸೇವೆಗಳ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಕಿ ಅವರು ಮಾತನಾಡಿ, ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ರೋಗಿಗಳು ಹೆಚ್ಚು ಜಾಗೃತರಾಗುತ್ತಿದ್ದು, ಇದರಿಂದ ಅವರು ಶೀಘ್ರವಾಗಿ ವೈದ್ಯರ ಭೇಟಿ ಮಾಡಲು ದಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವೈದ್ಯಕೀಯ ಕ್ಯಾನ್ಸರ್ ರೋಗತಜ್ಞರಾದ ಡಾ. ಸನಲ್ ಫೆರ್ನಾಂಡಿಸ್ ಅವರು ಹಾಜರಿದ್ದರು.
­

Ad
Ad
Nk Channel Final 21 09 2023