ಬಂಟ್ವಾಳ: ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಶ್ರೀವಿಶ್ವರೂಪದರ್ಶನ ಕಾರ್ಯಕ್ರಮ ನಡೆಯಿತು.
Ad
ಶ್ರೀ ಕ್ರೋಧಿ ನಾಮ ಸಂವತ್ಸರದ ಕಾರ್ತಿಕ ಶುದ್ದ ನವಮಿಯಾದ ಭಾನುವಾರ ಪ್ರಾತಃಕಾಲ 4.00 ಗಂಟೆಗೆ ಬ್ರಾಹ್ಮ ಮುಹೂರ್ತದಲ್ಲಿ ಶ್ರೀ ತಿರುಮಲ ವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಲೋಕ ಕಲ್ಯಾಣಕ್ಕಾಗಿ 23ನೇ ವರ್ಷದ ವಿಶ್ವರೂಪದರ್ಶನ ಸೇವೆಯನ್ನು ದಿವ್ಯ ಜ್ಯೋತಿ ಬೆಳಗಿಸಿ ನಡೆಸಲಾಯಿತು.
Ad
ಬೆಳಗ್ಗೆ ಕಾಕಡಾರತಿ, ಜಾಗರ ಪೂಜೆ ನಂತರ ವಿಶೇಷಾಲಂಕಾರ ಮಾಡಲಾಯಿತು. ಶ್ರೀ ದೇವರ ವಿಶೇಷ ವಿಶ್ವರೂಪದರ್ಶನ ಪ್ರಸಾದ ವಿತರಣೆ ನಡೆಯಿತು. ಇದೇ ವೇಳೆ ವಿಶೇಷ ಭಜನಾ ಕಾರ್ಯಕ್ರಮವೂ ಜರಗಿತು.
Ad
ಪೈ ಇಂಟರ್ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ ಅಜಿತ್ ಪೈ ವಿಶೇಷ ಸೇವಾದಾರರಾಗಿದ್ದರೆ, ಬಂಟ್ವಾಳ ಕೆನರಾ ಬ್ಯಾಂಕ್ ವಿಶೇಷ ಸಹಕಾರ ನೀಡಿತು. ಈ ಸಂದರ್ಭ ಆಡಳಿತ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
Ad
Ad