Bengaluru 22°C
Ad

ಜಗನ್ ಕೂಡ ಹುಳಾ ಬಿದ್ದು‌ ಸಾಯುತ್ತಾನೆ; ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲ್ಕರ್ಣಿ

New Project (3)

ಮಂಗಳೂರು: ನಗರದಲ್ಲಿ ತಿರುಪತಿ ತಿಮ್ಮಪ್ಪನ ಪ್ರಸಾದ ವಿಚಾರಕ್ಕೆ ಸಂಬಂಧ ಪಟ್ಟಂತೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲ್ಕರ್ಣಿ ಆಕ್ರೋಶ ಹೊರ ಹಾಕಿದ್ದಾರೆ.

ತಿರುಪತಿ ತಿಮ್ಮಪ್ಪನ ಪ್ರಸಾದ ವಿಚಾರದಲ್ಲಿ ಬಹಳ ದೊಡ್ಡ ದ್ರೋಹ ಮಾಡಿದ್ದಾರೆ. ಅನಾಹುತ‌ ಮಾಡಿದ್ದಾರೆ. ಇಡೀ ಹಿಂದೂ ಸಮಾಜಕ್ಕೆ ಆಘಾತ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಂಪೂರ್ಣ ತನಿಖೆ‌ ಆಗಬೇಕು . ಇಡೀ ದೇಶದ ಎಲ್ಲಾ‌ ಹಿಂದೂ‌ ಸಂಘಟನೆಗಳು ಸೇರಿ ಜಗನ್‌ ಮನೆಗೆ ಮುತ್ತಿಗೆಗೆ ಚಿಂತನೆ‌ ನಡೆಯುತ್ತಿದೆ. ರಾಜ್ಯದಲ್ಲೂ ಈ ಕುರಿತು ಚಿಂತನೆ ನಡೆಯುತ್ತಿದೆ.

ಈ ವಿಷಯವನ್ನು ಇಲ್ಲಿಗೆ ಬಿಡುವ ಪ್ರಶ್ನೆ ಇಲ್ಲ. ತಿರುಪತಿಯಲ್ಲಿ ತಕ್ಷಣಕ್ಕೆ ಒಂದು ಸುಸಜ್ಜಿತ ಲ್ಯಾಬ್ ಆಗಬೇಕು ಎಂದು‌ ನಮ್ಮ ಒತ್ತಾಯ. ಮುಂಬರುವ ದಿನಗಳಲ್ಲಿ ಜಗನ್ ಗೆ ಹಿಂದೂ ಸಮಾಜ ತಕ್ಕ ಉತ್ತರ ನೀಡುತ್ತೆ. ತಪ್ಪಿತಸ್ಥರ ಮೇಲೆ‌ ಕಾನೂನು ಕ್ರಮ ಆಗಬೇಕು. ಉದ್ದೇಶ ಪೂರ್ವಕವಾಗಿ ಇದನ್ನ ಮಾಡಲಾಗಿದೆ. ಜಗನ್ ಒಮ್ಮೆ ಯೋಚನೆ ಮಾಡಬೇಕು ಅವರ ತಂದೆ ಸಾವು ಹೇಗಾಯಿತು ಅಂತ. ತಿರುಪತಿ ತಿಮ್ಮಪ್ಪನ ಶಾಪದಿಂದ ಅವರ ಹೆಣ ಕೂಡ ಸಿಗಲಿಲ್ಲ , ಬೀದಿ ಹೆಣವಾಗಿ ಹೋದ. ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಿದವರ ಸಾವು ಇದೇ ರೀತಿ ಬರುತ್ತೇ. ಜಗನ್ ಕೂಡ ಹುಳಾ ಬಿದ್ದು‌ ಸಾಯುತ್ತಾನೆ ಎಂದು ಗಂಗಾಧರ್ ಕುಲ್ಕರ್ಣಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

Ad
Ad
Nk Channel Final 21 09 2023