ಮಂಗಳೂರು: ಅಕ್ಟೋಬರ್ 14, 2024 ರಂದು ಸ್ನೇಹಾಲಯದ ಟ್ರಸ್ಟಿಯಾದ ಸರಿತಾ ಕ್ರಾಸ್ತಾರವರು, ಸ್ನೇಹಾಲಯ ತಂಡದವರ ಸಹಕಾರದೊಂದಿಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಅನಿತಾ(40) ಎಂಬ ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಿಸಿದರು. ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ಈಕೆ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು ತನ್ನ ಊರು ಮುಂಬೈ ಎನ್ನುತ್ತಿದ್ದಾಳೆ .ಈಕೆಯ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
Ad