Bengaluru 25°C
Ad

ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅದ್ಧೂರಿಯಾಗಿ ಜರಗಿದ ಬೆಳ್ಳಿಹಬ್ಬ ಸಂಭ್ರಮ

ಸಹಾಯ ಮನೋಭಾವದ ಮಾತೆ ನಿತ್ಯಾಧರ್, ಅಂತಹ ಶ್ರೇಷ್ಠ ತಾಯಿಯ ಹೆಸರಿನಡಿಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸದ್ಗುಣ ಸಂಪನ್ನವರಿತು ಜೀವಿಸಲು ಸಾಧ್ಯ

ಉಳ್ಳಾಲ: ಸಹಾಯ ಮನೋಭಾವದ ಮಾತೆ ನಿತ್ಯಾಧರ್, ಅಂತಹ ಶ್ರೇಷ್ಠ ತಾಯಿಯ ಹೆಸರಿನಡಿಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸದ್ಗುಣ ಸಂಪನ್ನವರಿತು ಜೀವಿಸಲು ಸಾಧ್ಯ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ| ಫಾ| ಪೀಟರ್ ಪೌಲ್ ಸಲ್ದಾನ್ಹ ಹೇಳಿದರು.

Ad

ಬಬ್ಬುಕಟ್ಟೆ ನಿತ್ಯಾಧರನಗರದ ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾದ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೇ ಶಾಲೆಯ ಆಸ್ತಿ. 25 ವರ್ಷಗಳ ನಿರಂತರ ಸಾಧನೆಗೆ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಎಲ್ಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿಗೆ ಕಾರಣವಾಗಿರುತ್ತಾರೆ. ಜ್ಞಾನದ ಕಾಶಿ ನಿತ್ಯಾಧರಶಾಲೆ ಆಗಿರುವುದರಿಂದ ಪ್ರದೇಶಕ್ಕೆ ನಿತ್ಯಾಧರನಗರ ಎಂಬ ಬಿರುದೇ ದೊರಕಿದೆ. ಆಂತರಿಕ ಜ್ಞಾನದ ಜೊತೆಗೆ ಸಂವಹನ ಜ್ಞಾನವೂ ಅತೀ ಅಗತ್ಯ ಎಂದರು.

Ad

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಪಿಯುಸಿ ಶಿಕ್ಷಣವನ್ನು ಶೀಘ್ರವೇ ಆರಂಭಿಸಿರಿ. ಹೆತ್ತವರ ಆಸ್ತಿ ಸಂಪತ್ತಾಗಿ ಸಮಾಜದ ಆಸ್ತಿಯಾಗಿ ಬೆಳೆಸುವ ಶಿಕ್ಷಣ ಸಂಸ್ಥೆಯಾಗಿದೆ. ಸಂತ ಜೆರೋಸ ಮತ್ತು ಸಂತ ಅಲೋಷಿಯಸ್ ಶಾಲೆಯಲ್ಲಿ ಪಡೆದ ಶಿಕ್ಷಣದಿಂದ ವೈಯಕ್ತಿಕವಾಗಿ ಎತ್ತರ ಸ್ಥಾನಗಳನ್ನು ಆಲಂಕರಿಸುವ ಗುಣಗಳನ್ನು ಪಡೆಯಲು ಸಾಧ್ಯವಾಗಿದೆ.

Ad

ಬಡತನ ಕಷ್ಟವನ್ನು ದೂರಮಾಡಿ , ಹೆತ್ತವರಿಗೆ ಸ್ವಾಭಿಮಾನದ ಬದುಕು ರಚಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಸರಕಾರದ ಯೋಜನೆಗಳನ್ನು ಶಾಸಕರು ಮುಟ್ಟಿಸಬಹುದು ಆದರೆ ಕುಟುಂಬದೊಳಗಿನ ಸಮಸ್ಯೆಗಳನ್ನು ಶಿಕ್ಷಣ ಪಡೆದ ಮಕ್ಕಳಿಂದ ಮಾತ್ರ ಸಾಧ್ಯ. ಶಿಕ್ಷಣದ ಜೊತೆಗೆ ದೊಡ್ಡಮಟ್ಟಿನ ವ್ಯಕ್ತಿತ್ವ ರೂಪಿಸುವ ಕಾರ್ಯಗಳಾಗಬೇಕು.

Ad

ಸಮಸ್ಯೆ ಬಂದಾಗ ಧೈರ್ಯವಾಗಿ ಎದುರಿಸುವ, ಎಲ್ಲರನ್ನು ಪ್ರೀತಿಯಿಂದ ಕಾಣುವ ಗುಣಗಳನ್ನು ಮೈಗೂಡಿಸುವಂತೆ ಮಾಡಿರಿ. ಮಾಲ್ ಗಳಿಗೆ ಮಕ್ಕಳನ್ನು ಕೊಂಡೊಯ್ಯುವ ಬದಲು ವೆನ್ಲಾಕ್ , ಫಾದರ್ ಮುಲ್ಲಸ್ ð ಆಸ್ಪತ್ರೆಗೆ ಕೊಂಡೊಯ್ದು ರೋಗಿಗಳ ಸಂಕಷ್ಟ ಹಾಗೂ ಅದನ್ನು ನಿವಾರಿಸುವ ಗುಣಗಳನ್ನು ಬೆಳೆಸಿರಿ ಎಂದರು.

Ad

ಪೆರ್ಮನ್ನೂರು ಚರ್ಚ್ನ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ , ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಈಶ್ವರ್, ಉಳ್ಳಾಲ ನಗರಸಭೆ ಕೌನ್ಸಿಲರ್ ದೀಕ್ಷಿತಾ, ಪಾಲ್ದನೆ ಚರ್ಚ್ ಫಾ| ಅಲ್ಬನ್ ಡಿಸೋಜ, ನಿಡ್ಡೋಡಿ ಚರ್ಚ್ ಧರ್ಮಗುರು ಫಾ| ಡೇನಿಸ್ ಸುವಾರಿಸ್, ಲೊರೆಟ್ಟೋ ಚರ್ಚ್ ಧರ್ಮಗುರು ಫಾ| ಫ್ರಾನ್ಸಿಸ್ ಕ್ರಾಸ್ತ, ಅರ್ವ ಚರ್ಚಿನ ಫಾ| ಎಲಿಯಾಸ್ ಡಿಸೋಜ ಸನ್ಮಾನಿಸಲಾಯಿತು.

Ad

ಶಾಲಾ ಬೋಧಕ ಸಿಬ್ಬಂದಿಗಳಾದ ವಿಕ್ಟೋರಿಯಾ, ಸವಿತಾ ಸಿಕ್ವೇರಾ , ಲೀನಾ ಡಿಸಿಲ್ವಾ, ರೀಟಾ ಕ್ರೊಡೆರಿಯೋ , ನಿವೃತ್ತ ಶಿಕ್ಷಕಿಯರಾದ ಆ್ಯನಿ ಮೇರಿ ತೌರೋ, ಕಸ್ಟಲಿನೋ, ಪಿಟಿಐ ಕರ‍್ಯದರ್ಶಿಗಳಾದ ಬಾಬು ಪಿಲಾರ್, ದೇವಸ್ಯ, ಅಬೂಬಕರ್ ಸಿದ್ದೀಕ್ , ಶಾಲಾ ಕರೆಸ್ಫಾಂಡೆAಟ್ ಫಾ| ಆಂಟನಿ ಲಸ್ರಾದೋ, ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರಮೀಳಾ ರಾಡ್ರಿಗಸ್ ಇವರನ್ನು ಅಭಿನಂದಿಸಲಾಯಿತು.

Ad

ಶಾಲಾ ಮುಖ್ಯೋಪಾಧ್ಯಾಯಿನಿಯರಾದ ಭಗಿನಿ ಆ್ಯನಿ ತೌರೋ, ವಿಕ್ಟೋರಿಯಾ ಡಿಸೋಜ , ಪಿಪಿಸಿ ಉಪಾಧ್ಯಕ್ಷ ಜಾನ್ ಮೊಂತೇರೊ, ಶಿಕ್ಷಕ-ರಕ್ಷಕ ಸಂಘದ ಕರ‍್ಯದರ್ಶಿ ವೆಂಕಟೇಶ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಷಾನ್, ಶಾಲಾ ವಿದ್ಯಾರ್ಥಿ ನಾಯಕ ಆಶ್ಲೀಯಾ ಮಿನೇಜಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಳ್ಳಿ ಹಬ್ಬ ಸಂಭ್ರಮದ ಲಾಂಛನ ಹಾಗೂ ಸ್ಮರಣ ಸಂಚಿಕೆಯನ್ನು ಮಂಗಳೂರು ಬಿಷಪ್ ರೆ| ಫಾ| ಪೀಟರ್ ಪೌಲ್ ಸಲ್ದಾನ್ಹ ಉದ್ಘಾಟಿಸಿದರು.

Ad
Ad
Ad
Nk Channel Final 21 09 2023