Bengaluru 27°C
Ad

ಶ್ರೀ ಪ್ರಗತಿ ವಿಸ್ತಾರ ಏವಿಯೇಶನ್ ಕಾಲೇಜಿನ ಮೊದಲ ಬ್ಯಾಚ್‌ 42 ವಿದ್ಯಾರ್ಥಿಗಳೊಂದಿಗೆ ಶುಭಾರಂಭ

ಬೆಂಗಳೂರಿನ ಖ್ಯಾತ ವಿಮಾನಯಾನ ತರಬೇತಿ ಸಂಸ್ಥೆ ಬರ್ಡ್ ಏವಿಯೇಷನ್ ಅಧಿಕೃತ ಪ್ರಾಂಚೈಸಿ ಸಂಸ್ಥೆಯು ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯ ಮಾನೈ ಅರ್ಕ್ ಕಟ್ಟಡದಲ್ಲಿ ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಆ್ಯಂಡ್ ಮ್ಯಾನೇಜ್‌ಮೆಂಟ್ ಎಂಬ ಹೆಸರಿನೊಂದಿಗೆ ಮೊದಲ ಬ್ಯಾಚ್ ನವೆಂಬರ್ 13 ರಂದು 42 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡಿತು.

ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ತರಬೇತಿ ಸಂಸ್ಥೆ ಬರ್ಡ್ ಏವಿಯೇಷನ್ ಅಧಿಕೃತ ಪ್ರಾಂಚೈಸಿ ಸಂಸ್ಥೆಯು ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯ ಮಾನೈ ಅರ್ಕ್ ಕಟ್ಟಡದಲ್ಲಿ ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಆ್ಯಂಡ್ ಮ್ಯಾನೇಜ್‌ಮೆಂಟ್ ಎಂಬ ಹೆಸರಿನೊಂದಿಗೆ ಮೊದಲ ಬ್ಯಾಚ್ ನವೆಂಬರ್ 13 ರಂದು 42 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡಿತು.

Ad

ಸ (2)

ಈ ತರಗತಿಯನ್ನು ಬಿ.ವಿ ಸೂರ್ಯನಾರಾಯಣ ನಿವೃತ್ತ ಪ್ರಾಂಶುಪಾಲರು ಇವರು ದೀಪ ಬೆಳಗಿಸಿ ಉದ್ಘಾಟಿಸಿ ತರಗತಿಯು ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು. ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕರು ಹಾಗೂ ಶ್ರೀ ಪ್ರಗತಿ ಎಜ್ಯುಕೇಶನ್ ಫೌಂಡೇಶನ್‌ನ ಕಾರ್ಯದರ್ಶಿಯಾಗಿರುವ ಶ್ರೀಯುತ ಗೋಕುಲ್‌ನಾಥ್ ಪಿ.ವಿ ಇವರು ಸಂಸ್ಥೆಯ ಉಪನ್ಯಾಸಕರನ್ನು ಹಾಗೂ ಲಭ್ಯವಿರುವ ಕೋರ್ಸುಗಳ ಕುರಿತು ಮಾಹಿತಿ ನೀಡಿದರು.

Ad

ಸ (3)

ಕಾರ‍್ಯಕ್ರಮದಲ್ಲಿ ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಸಂಸ್ಥೆಯ ಅಧ್ಯಕ್ಷರು ಶ್ರೀಮತಿ ಹೇಮಾವತಿ ಸುದರ್ಶನ್ ಮೂಡಬಿದಿರೆ, ಉಪಾಧ್ಯಕ್ಷರಾದ ಶ್ರೀಮತಿ ಹೇಮಲತಾ ಗೋಕುಲ್‌ನಾಥ್, ಖಜಾಂಜಿಯಾದ ಸುದರ್ಶನ್ ಮೂಡಬಿದಿರೆ,  ಬರ್ಡ್ ಸಂಸ್ಥೆ ಬೆಂಗಳೂರು ಇದರ ಉಪನ್ಯಾಸಕರಾದ ಅರುಣ್ ಜೋಸ್, ಆಡಳಿತಾಧಿಕಾರಿಯಾದ ಸ್ನಿಗ್ಧ ಆಳ್ವ ಹಾಗೂ ಉಪನ್ಯಾಸಕ ವೃಂದ, ಉಪನ್ಯಾಸಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ad

 

Ad
Ad
Nk Channel Final 21 09 2023