ಮಂಗಳೂರು: ಬಹುಭಾಷಾ ಸಾಹಿತಿಗಳು, ಹದಿನೈದು ಪುಸ್ತಕಗಳ ಪ್ರಕಾಶನ ಮಾಡಿದ, ಕಳೆದ ನಲ್ವತ್ತು ವರ್ಷಗಳ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಅವರನ್ನು ದಕ ಜಿಲ್ಲಾ ಮಂಗಳೂರು ಹೋಬಳಿ ಅಧ್ಯಕ್ಷರನ್ನಾಗಿ ಮಾಡಿ ಕಸಾಪ ಜಿಲ್ಲಾಧ್ಯಕ್ಷರಾದ ಎಂಪಿ ಶ್ರೀನಾಥ್ ಆದೇಶ ನೀಡಿದ್ದಾರೆ.
ದಕ ಜಿಲ್ಲಾ ಕಸಾಪ ಕಾರ್ಯಕಾರಿ ಸಂಘಟನಾ ಸದಸ್ಯರಾಗಿ ಪದೋನ್ನತಿಯನ್ನು ನೀಡಿದ ಆದೇಶವನ್ನು ಇದೆ. “ಪತಿ ಪತ್ನಿ ಸುತಾಲಯ” (ಡೈವರ್ಸ್ ಆಗದ ಹಾಗೆ ಸೂತ್ರಗಳು) ಬಹುಚರ್ಚಿತ ಲೈಬ್ರರಿ ಸ್ವೀಕೃತ ಹಾಗೂ ಕೊಂಕಣಿ, ತುಳು, ಬ್ಯಾರಿ ಭಾಷೆಯಲ್ಲಿ ತರ್ಜುಮೆಗೆ ಬೇಡಿಕೆಯ ಪುಸ್ತಕವೂ ಸೇರಿದಂತೆ ಸಕಲಾಭರಣ, ಆಭರಣಗಳು ಗದ್ಯ ಪುಸ್ತಕಗಳನ್ನು ಹಾಗೂ ನನ್ನವಳ ಕವಳ ಕವಿತಾ ಸಂಗ್ರಹವು ಕನ್ನಡದ ಇವರ ಬಹುಬೇಡಿಕೆಯ ಇತರ ಕೃತಿಗಳು.
ಮಾತೃಭಾಷೆ ಕೊಂಕಣಿಯಲ್ಲಿ ಎಂಟು ಕೃತಿಗಳು ಪ್ರಕಟ ಆಗಿವೆ. ತುಳುವಿನ ಮೊದಲ ಕೃತಿ ಮುದ್ರಣದಲ್ಲಿ ಇದೆ. ಕಳೆದ ವರ್ಷ 26ನೇ ಮಂಗಳೂರು ಪುರಭವನದಲ್ಲಿ ನಡೆದ ದಕ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತ ಸಮಯದಲ್ಲಿ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳನ್ನು ಆರಂಭ ಮತ್ತು ಸಮಾರೋಪವನ್ನು ಡಾ ಮೀನಾಕ್ಷಿ ರಾಮಚಂದ್ರ ಜೊತೆಗೆ ಸೇರಿ ಮಾಡಿ ಸಾಹಿತ್ಯ ಮತ್ತು ಸಂಘಟಕರ ಮೆಚ್ಚುಗೆ ಗಳಿಸಿದ್ದರು. ದಕ ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ ನೇಮಕಗೊಂಡ ನಿಕಟಪೂರ್ವ ಅಧ್ಯಕ್ಷ ಪ್ರೊಫೆಸರ್ ಪುಷ್ಪರಾಜ್ ಶುಭಾಶಯ ಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.