Bengaluru 27°C

ಕನಸಿನ ಕಟ್ಟಡ ದೊಂದಿಗೆ ಕನಸಿನ ಭಾರತ ನಿರ್ಮಾಣ; ರೋಹನ್ ಕಾರ್ಪೋರೇಷನ್ ಆವರಣದಲ್ಲಿ ಸ್ವಾತಂತ್ರ್ಯೋತ್ಸವ

Ind (2)

ಮಂಗಳೂರು : 78 ನೇ ಸ್ವಾತಂತ್ರ ದಿನವನ್ನು ರೋಹನ್ ಕಾರ್ಪೋರೇಷನ್ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ಕಾರ್ಮಿಕ ಅಧಿಕಾರಿ ವಿಲ್ಮಾ “ಕನಸಿನ ಕಟ್ಟಡದ ರೋಹನ್ ಕಾರ್ಪೊರೇಷನ್ ಜೊತೆ ಸೇರಿ ಹೊಸ ಭಾರತ ನಿರ್ಮಾಣ ಮಾಡೋಣ, ಕಾರ್ಮಿಕರಿಲ್ಲದೆ ನಮಗೆ ಸೂರಿಲ್ಲ ನಿಮ್ಮ ನಡುವಿನ ಸ್ವಾತಂತ್ರೋತ್ಸವ ನಿಜಕ್ಕೂ ನೆನಪಿನ ಬುತ್ತಿ,” ಎಂದರು.
Ind (1)


ಸ್ವಾತಂತ್ರೋತ್ಸವದ ಕುರಿತಾಗಿ ಮಾತನಾಡಿದ ಕಾರ್ಮಿಕ ಅಧಿಕಾರಿ ಕುಮಾರ್ “ಕಾರ್ಮಿಕರಿಗೆ ಇಂದು ರಜೆ ಘೋಷಣೆ ಮಾಡಿದ್ದೇವೆ, ಸ್ವಾತಂತ್ರಕ್ಕಾಗಿ ಮುಡಿಪಿರುವ ಈ ದಿನವನ್ನು ಕಾರ್ಮಿಕರು ಸ್ವತಂತ್ರವಾಗಿ ಆಚರಿಸಿ” ಎಂದು ಹೇಳಿದರು.
Whatsapp Image 2024 08 16 At 10.43.49 Am (1)


ರೋಹನ್ ಕಾರ್ಪೊರೇಶನ್‌ನ ದೈನಂದಿನ ಕಾರ್ಯಗಳಲ್ಲಿ ಒಗ್ಗಟ್ಟಿನ ಮೌಲ್ಯಗಳನ್ನು ಸಾಕಾರಗೊಳಿಸಿ, ವಿವಿಧತೆಯಲ್ಲಿನ ಏಕತೆಯನ್ನು ಗೌರವಿಸಿ ಪ್ರಗತಿಯತ್ತ ನಿರಂತರವಾಗಿ ಕೆಲಸ ಸಾಗಲಿ. ನಮ್ಮ ದೇಶವನ್ನು ಮತ್ತು ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂದು ಪ್ರತಿಜ್ಞೆ ಮಾಡಿ. ಮುಂದಿನ ಪೀಳಿಗೆಗಳು ಹೆಮ್ಮೆಪಡುವಂತಹ ಭವಿಷ್ಯವನ್ನು ರಚಿಸುವಲ್ಲಿ ಒಂದಾಗೋಣ. ಎಂಬ ಆಶಯದೊಂದಿಗೆ ರೋಹನ್ ಕಾರ್ಪೊರೇಷನ್ನ ಕಾರ್ಯಕ್ರಮ ಯಶಸ್ವಿ ಕಂಡಿತು.


Whatsapp Image 2024 08 16 At 10.43.50 Am
ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೊರೇಷನ್ನ ಸದಸ್ಯರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.


Nk Channel Final 21 09 2023