ಮಂಗಳೂರು: 2024 ರ ಸಾಲಿನ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನ್ಯೂಸ್ ಕರ್ನಾಟಕ ವಾಹಿನಿ ಅರ್ಪಿಸುವ ಪಾಥ್ವೆ ಎಂಟರ್ಪ್ರೈಸರ್ಸ್ ಸಹಯೋಗದಲ್ಲಿ ವೈಯಕ್ತಿಕ ರಾಧಾ ಹಾಗೂ ಕೃಷ್ಣ ವಿಡಿಯೋ ಸ್ಪರ್ಧೆ (ಕಾಂಟೆಸ್ಟ್) ಆಯೋಜಿಸಲಾಗಿತ್ತು.
ಪುಟ್ಟ ಮಕ್ಕಳು ಕೃಷ್ಣ ಅಥವಾ ರಾಧೆ ವೇಷ ತೊಟ್ಟರೆ ನೋಡಲೆರಡು ಕಣ್ಣುಗಳು ಸಾಲದು. ಹೌದು. . ನ್ಯೂಸ್ ಕರ್ನಾಟಕ ವತಿಯಿಂದ ನಡೆದ ʼರಾಧಾ ಹಾಗೂ ಕೃಷ್ಣ ವಿಡಿಯೋ ಸ್ಪರ್ಧೆಯಲ್ಲಿ ಸುಮಾರು 133 ಬಾಲ ಪುಟಾಣಿಗಳು ಸ್ಪರ್ಧೆಗೆ ನೋಂದಾವಣೆ ಮಾಡಿದ್ದು, ಕಾರ್ಯಕ್ರಮದ ಯಶಸ್ವಿಗೆ ಪ್ರಮುಖ ಕಾರಣವಾಗಿತ್ತು.
ಇನ್ನು ವೈಯಕ್ತಿಕ ರಾಧಾ ಹಾಗೂ ಕೃಷ್ಣ ವಿಡಿಯೋ ಸ್ಪರ್ಧೆಯಲ್ಲಿ ಶ್ರೀ ಕೃಷ್ಣ ನ ವೇಷ ತೊಟ್ಟ ಶ್ರೀಯಾನ್ ಯು. ಆರ್ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನ ವಿಹಾನ್ ಕೆ, ತೃತೀಯ ಸ್ಥಾನ ಪ್ರಿಷಾ ಹಾಗು ಚತುರ್ಥ ಸ್ಥಾನ ಜಶ್ರಿತಾ ಸಾಯಿ, ರಿಷಾ ಎಸ್ ಕಂಚನ್, ಲಕ್ಷ್ ಪಿ, ಪ್ರಣವಿ, ವಾಗ್ಮಿ ಕೆ, ಶ್ರೇಯಸ್ ರಾವ್ ಪಡೆದುಕೊಂಡಿದ್ದಾರೆ.
ಇನ್ನು ವೈಯಕ್ತಿಕ ರಾಧೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೌತಮಿ ರೆಡ್ಡಿ ಪಡೆದುಕೊಂಡರೆ, ದ್ವಿತೀಯಾ ಸ್ಥಾನ ವಂಶಿಕಾ ಪಡೆದುಕೊಂಡಿದ್ದಾರೆ.
ಮುಖ್ಯ ತೀರ್ಪುಗಾರರಾಗಿ ಪಾಥ್ವೇ ಎಂಟರ್ ಪ್ರೈಸಸ್ ನ ಶ್ರೀ ದೀಪಕ್ ಗಂಗೂಲಿ, ಎ ಎಸ್ ದಯಾನಂದ ಕುಂತೂರು ಆಗತಾದಿ ಡೋಲಬಾರೀಕೆ ಗುತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು., ಹಾಗು ನಿರ್ದೇಶಕ ಶಿವಕುಮಾರ್ ರೈ ಪುತ್ತೂರು ಸಹಕರಿಸಿದರು.
ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಪ್ರಶಸ್ತಿ ಪತ್ರ ಬಹುಮಾನ ನೀಡಲಾಗುತ್ತದೆ.