Bengaluru 22°C
Ad

ಕದ್ರಿ ಪಾರ್ಕ್ ರಸ್ತೆಯಲ್ಲಿ ಮರವೇರಿದ್ದ ಬೃಹತ್‌ಗಾತ್ರದ ಹೆಬ್ಬಾವಿನ ರಕ್ಷಣೆ

ನಗರದ ಕದ್ರಿ ಪಾರ್ಕ್ ರಸ್ತೆಯ ಹಳೆಯ ಜಿಂಕೆ ಪಾರ್ಕ್ ಮುಂಭಾಗದಲ್ಲಿರುವ ಬೃಹತ್ ಗಾತ್ರದ ಮರವೇರಿದ್ದ ಹೆಬ್ಬಾವನ್ನು ಉರಗರಕ್ಷಕರು ಆದಿತ್ಯವಾರ ಬೆಳಗ್ಗೆ ರಕ್ಷಿಸಿದ್ದಾರೆ.

ಮಂಗಳೂರು: ನಗರದ ಕದ್ರಿ ಪಾರ್ಕ್ ರಸ್ತೆಯ ಹಳೆಯ ಜಿಂಕೆ ಪಾರ್ಕ್ ಮುಂಭಾಗದಲ್ಲಿರುವ ಬೃಹತ್ ಗಾತ್ರದ ಮರವೇರಿದ್ದ ಹೆಬ್ಬಾವನ್ನು ಉರಗರಕ್ಷಕರು ಆದಿತ್ಯವಾರ ಬೆಳಗ್ಗೆ ರಕ್ಷಿಸಿದ್ದಾರೆ.

ಶನಿವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಪಾರ್ಕ್ ರಸ್ತೆಗೆ ಬಂದಿದ್ದ ಬಾಲಕನೋರ್ವನು ಬೃಹತ್ ಗಾತ್ರದ ದೇವದಾರು ಮರದಲ್ಲಿದ್ದ ಈ ಹೆಬ್ಬಾವನ್ನು ಕಂಡಿದ್ದಾನೆ. ಇದು ಪಾರ್ಕ್ ಅಸೋಸಿಯೇಷನ್ ಕಮಿಟಿಯ ಅಧ್ಯಕ್ಷ ಜಗನ್ನಾಥ ಗಂಭೀರ್ ಅವರ ಗಮನಕ್ಕೆ ಬಂದಿದೆ. ತಕ್ಷಣ ಅವರು ಈ ವಿಚಾರವನ್ನು ಉರಗರಕ್ಷಕರ ಗಮನಕ್ಕೆ ತಂದಿದ್ದಾರೆ. ಆದರೆ ರಾತ್ರಿವರೆಗೆ ಹೆಬ್ಬಾವು ಕೆಳಗೆ ಇಳಿದಿರಲಿಲ್ಲ. ರಾತ್ರಿ ಉರಗರಕ್ಷಕರು ಹೆಬ್ಬಾವನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ.

ರವಿವಾರ ಬೆಳಗ್ಗ ಪಾರ್ಕ್ ಅಸೋಸಿಯೇಷನ್ ಹೆಬ್ಬಾವಿನ ರಕ್ಷಣೆಗಾಗಿ ಅಗ್ನಿಶಾಮಕ ದಳಕ್ಕೆ ಕೋರಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದರೂ ಹೆಬ್ಬಾವು 25 ಎತ್ತರದಲ್ಲಿರುವ ಮರದಲ್ಲಿದ್ದರಿಂದ ಅವರಿಂದ ರಕ್ಷಣೆ ಸಾಧ್ಯವಾಗಿಲ್ಲ. ಆದ್ದರಿಂದ ಬೆಳಗ್ಗೆ 9ಗಂಟೆಗೆ ಉರಗರಕ್ಷಕರಾದ ಭುವನ್ ದೇವಾಡಿಗ, ಪ್ರಶಂಸಾ, ರಾಕೇಶ್ ಕೋಟೆ ಸ್ಥಳಕ್ಕೆ ಆಗಮಿಸಿದ್ದಾರೆ. ಮರವೇರಿ ಕೊಂಬೆಯನ್ನು ತುಂಡರಿಸಿ ಹಾವನ್ನು ಹಗ್ಗದ ಮೂಲಕ ಕೆಳಗಿಳಿಸಿ ರಕ್ಷಿಸಿದ್ದಾರೆ. ಸುಮಾರು ಒಂದೂವರೆ ಗಂಟೆಯ ಕಾರ್ಯಾಚರಣೆಯಲ್ಲಿ ಆರುವರೆ ಅಡಿ ಉದ್ದದ ಹೆಬ್ಬಾವು ಉರಗರಕ್ಷಕರ ಚೀಲ ಸೇರಿದೆ. ನಿಜವಾಗಿಯೂ ಹೆಬ್ಬಾವು ಮರವೇ ಆವಾಸಸ್ಥಾನ. ಆದ್ದರಿಂದ ಅದರ ರಕ್ಷಣೆ ಅಗತ್ಯವಿಲ್ಲ. ಆದರೆ ನಾಗರಿಕರ ಒತ್ತಾಯದ ಮೇರೆಗೆ ಹೆಬ್ಬಾವಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಅದನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ ಎಂದು ಉರಗರಕ್ಷಕ ಭುವನ್ ದೇವಾಡಿಗ ತಿಳಿಸಿದ್ದಾರೆ.

Ad
Ad
Nk Channel Final 21 09 2023