Bengaluru 29°C
Ad

ರಾಷ್ಟ್ರೀಯ ಹೆದ್ದಾರಿಯಲ್ಲಿಆರ್ ಎಎಫ್ ಲಾರಿ ಪಲ್ಟಿ, ಇಬ್ಬರಿಗೆ ಗಾಯ

ರಾಪಿಡ್ ಏಕ್ಷನ್ ಫೋರ್ಸ್ ನ ಗೂಡ್ಸ್ ಲಾರಿಯೊಂದು ಮಗುಚಿ ಬಿದ್ದ ಘಟನೆ ಸೋಮವಾರ ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆ ಎಂಬಲ್ಲಿ ಸಂಭವಿಸಿದೆ.

ಮಂಗಳೂರು: ರಾಪಿಡ್ ಏಕ್ಷನ್ ಫೋರ್ಸ್ ನ ಗೂಡ್ಸ್ ಲಾರಿಯೊಂದು ಮಗುಚಿ ಬಿದ್ದ ಘಟನೆ ಸೋಮವಾರ ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆ ಎಂಬಲ್ಲಿ ಸಂಭವಿಸಿದೆ.
ಆರ್ ಎ ಎಫ್ ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ.ರೋಡ್ ಗೆ ಹೋಗುತ್ತಿರುವಾಗ ಕುದ್ರೋಟಿಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿತ್ತು. ಅಪಘಾತದಿಂದ ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು, ಮತ್ತೋರ್ವ ಪ್ರಯಾಣಿಕ ಸಾಂತಪ್ಪ ನಾಯಕ್ ಅವರನ್ನು ಚಿಕಿತ್ಸೆಗೆ ಮಂಗಳೂರು ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪುಂಜಾಲಕಟ್ಟೆ ಪೊಲೀಸರು ತಿಳಿಸಿದ್ದಾರೆ. ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಸ್ಥಳಕ್ಕಾಗಮಿಸಿ ಲಾರಿಯನ್ನು ಮೇಲೆತ್ತಲು ಕ್ರೇನ್ ತರಿಸಿ ಸಹಕರಿಸಿದರು

Ad
Ad
Nk Channel Final 21 09 2023