ಮಂಗಳೂರು: ವೀಕೆಂಡ್ ನಲ್ಲಿ ಪಾರ್ಟಿ ಮಾಡಲು ಸ್ನೇಹಿತೆ ಜೊತೆಗೆ ತೆರಳಿದ್ದ ಯವತಿಯ ಮಾನಭಂಗಕ್ಕೆ ಯತ್ನಿಸಿ, ಹಲ್ಲೆಗೆ ಮುಂದಾದ ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಗಸ್ಟ್ 3ರ ಶನಿವಾರ ರಾತ್ರಿ 10.30 ರ ವೇಳೆಗೆ ಪಾಂಡೇಶ್ವರದ ಫಿಝಾ ನೆಕ್ಸಸ್ ಮಾಲ್ ನಲ್ಲಿರುವ ಶೆರ್ಲಾಕ್ ಪಬ್ ಗೆ 22 ವರ್ಷದ ಯುವತಿಯೋರ್ವಳು ಸ್ನೇಹಿತೆಯರೊಂದಿಗೆ ಪಾರ್ಟಿ ಮಾಡಲೆಂದು ತೆರಳಿದ್ದಳು. ಈ ಸಂದರ್ಭ ಅಲ್ಲಿದ್ದ ನಾಲ್ವರು ಯುವಕರು ಅಸಭ್ಯವಾಗಿ ವರ್ತಿಸಿ ಯುವತಿಯ ಎದೆಗೆ ಕೈ ಹಾಕಿದ್ದಲ್ಲದೇ ಆಕೆಗೂ ಮತ್ತು ಆಕೆಯ ಸ್ನೇಹಿತೆಯರಿಗೂ ಮಾನಭಂಗ ಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ಬಿಯರ್ ಬಾಟಲಿಯಿಂದ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ಪುತ್ತೂರು ತಾಲೂಕಿನವರಾದ ವಿನಯ್ (33), ಮಹೇಶ್ (27), ಪ್ರೀತೇಶ್ (34), ನಿತೇಶ್ (33)) ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ