Bengaluru 22°C
Ad

ಬಿಜೆಪಿ ದ.ಕ ಜಿಲ್ಲಾ ಅಧ್ಯಕ್ಷರ ಪುತ್ತೂರು ಮಂಡಲ ಪ್ರವಾಸ

ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ರವರು ಪುತ್ತೂರು ಮಂಡಲ ಪ್ರವಾಸ ಮಾಡಿ ಅಟಲ್ ಸದಸ್ಯತನ ನೋಂದಾವಣೆ ಯ ಪ್ರಗತಿ ಬಗ್ಗೆ ಮಾಹಿತಿ ಪಡೆದರು.

ಪುತ್ತೂರು: ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ರವರು ಪುತ್ತೂರು ಮಂಡಲ ಪ್ರವಾಸ ಮಾಡಿ ಅಟಲ್ ಸದಸ್ಯತನ ನೋಂದಾವಣೆ ಯ ಪ್ರಗತಿ ಬಗ್ಗೆ ಮಾಹಿತಿ ಪಡೆದರು.

Ad

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಸದಸ್ಯತನ ಗುರಿ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯತನ ನೋಂದಾವಣೆ ಮಾಡುವ ಬಗ್ಗೆ ಮತ್ತು ಗ್ರಾಮ ಪಂಚಾಯತ್ ಉಪಚುನಾವಣೆಯ ಕಾರ್ಯತಂತ್ರದ ಕುರಿತು ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

Ad

ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್ , ಪ್ರೇಮಾನಂದ ಶೆಟ್ಟಿ , ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು , ರಾಜ್ಯ ಒಬಿಸಿ ಮೋರ್ಛ ಕಾರ್ಯದರ್ಶಿ ಆರ್.ಸಿ.ನಾರಾಯಣ್ , ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ , ಜಿಲ್ಲಾ ಕಾರ್ಯದರ್ಶಿ ವಿಧ್ಯಾ ಗೌರಿ , ನಗರ ಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ , ಉಪಾಧ್ಯಕ್ಷ ಬಾಲಚಂದ್ರ ,

Ad

ಎರಡು ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು , ಪ್ರಶಾಂತ್ ನೆಕ್ಕಿಲಾಡಿ , ಅನಿಲ್ ತೆಂಕಿಲ , ನಾಗೇಶ್ ಪ್ರಭು ಸೇರಿದಂತೆ ಹಿರಿಯ ಪ್ರಮುಖರು , ಎರಡು ಮಂಡಲಗಳ ಪದಾಧಿಕಾರಿಗಳು , ನಿಕಟಪೂರ್ವ ಪದಾಧಿಕಾರಿಗಳು , ವಿವಿಧ ಮೋರ್ಛಗಳ ಪದಾಧಿಕಾರಿಗಳು , ಮಹಾಶಕ್ತಿಕೇಂದ್ರ ಅಧ್ಯಕ್ಷ , ಕಾರ್ಯದರ್ಶಿಗಳು , ಕಾರ್ಯಕರ್ತರು ಭಾಗವಹಿಸಿದ್ದರು. ನಗರ ಮಂಡಲದ ಪ್ರ.ಕಾರ್ಯದರ್ಶಿ ಅನಿಲ್ ತೆಂಕಿಲ ಸ್ವಾಗತಿಸಿ , ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ಉಮೇಶ್ ಕೋಡಿಬೈಲು ವಂದಿಸಿದರು.

Ad
Ad
Ad
Nk Channel Final 21 09 2023