Bengaluru 21°C
Ad

ಪುತ್ತೂರು ಮೀನು ಮಾರುಕಟ್ಟೆಯ ಅವ್ಯವಸ್ಥೆ; ಗ್ರಾಹಕರಿಗೆ ತೊಂದರೆ

ಸುಸಜ್ಜಿತವಾಗಿದ್ದ ಪುತ್ತೂರು ಮೀನಿನ ಮಾರುಕಟ್ಟೆ ಇದೀಗ ನಗರಸಭೆಯ ನಿರ್ಲಕ್ಷ್ಯದಿಂದ ಕಂಗೆಟ್ಟುಹೋಗಿದೆ. ಹೌದು ನಗರದ ಹೃದಯ ಭಾಗದಲ್ಲಿರುವ ಮೀನಿನ ಮಾರುಕಟ್ಟೆ ನಗರಸಭೆಗೆ ಹೊಂದಿಕೊಂಡೇ ಕಾರ್ಯಚರಿಸುತ್ತಿದೆ. ಇಷ್ಟಾಗಿಯೂ ನಗರಸಭೆಗೆ ಇನ್ನೂ ಮೀನಿನ ಮಾರುಕಟ್ಟೆಯ ಅವ್ಯವಸ್ಥೆ ಗೋಚರವಾಗಿಲ್ಲ. ಮೀನು ಮಾರುಕಟ್ಟೆಯ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ.

ಮಂಗಳೂರು : ಸುಸಜ್ಜಿತವಾಗಿದ್ದ ಪುತ್ತೂರು ಮೀನಿನ ಮಾರುಕಟ್ಟೆ ಇದೀಗ ನಗರಸಭೆಯ ನಿರ್ಲಕ್ಷ್ಯದಿಂದ ಕಂಗೆಟ್ಟುಹೋಗಿದೆ. ಹೌದು ನಗರದ ಹೃದಯ ಭಾಗದಲ್ಲಿರುವ ಮೀನಿನ ಮಾರುಕಟ್ಟೆ ನಗರಸಭೆಗೆ ಹೊಂದಿಕೊಂಡೇ ಕಾರ್ಯಚರಿಸುತ್ತಿದೆ. ಇಷ್ಟಾಗಿಯೂ ನಗರಸಭೆಗೆ ಇನ್ನೂ ಮೀನಿನ ಮಾರುಕಟ್ಟೆಯ ಅವ್ಯವಸ್ಥೆ ಗೋಚರವಾಗಿಲ್ಲ. ಮೀನು ಮಾರುಕಟ್ಟೆಯ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ.

ಜೊತೆಗೆ ಮೀನಿನ ಮಾರುಕಟ್ಟೆ ಒಳಗಡೆ ಹೇಗಪ್ಪಾ ಹೋಗೋದು ಅನ್ನೋ ಪರಿಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿದೆ. ಮೀನಿನ ಮಾರುಕಟ್ಟೆಗೆ ಎಂಟ್ರಿಯಾಗುವ ಸ್ಥಳದಲ್ಲೇ ಸ್ಲ್ಯಾಬ್ ಗಳೆಲ್ಲ ಎದ್ದು ನಿಂತಿವೆ. ಅಲ್ಲದೇ ಮೀನಿನ ಐಸ್ ನೀರಾಗಿ ವಿಪರೀತ ವಾಸನೆ ಗಬ್ಬೆದ್ದು ಬರುತ್ತವೆ. ಈ ಮೀನಿನ ನೀರು ಅಲ್ಲೇ ನಿಂತು ಮೀನಿನ ಮಾರುಕಟ್ಟೆ ಒಳ ಹೋಗುವ ಗ್ರಾಹಕರಿಗೆ ಭಾರೀ ತೊಂದರೆಯಾಗುತ್ತಿದೆ.

ಇದಲ್ಲದೇ ಗ್ರಾಹಕರು ಒಳ ಬರುವ ದಾರಿಯಲ್ಲೇ ಮೀನಿನ ಬಾಕ್ಸೈಟ್ ಗಳನ್ನು ಇಟ್ಟಿರುವುದರಿಂದ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಮೀನಿನ ಬಾಕ್ಸೈಟ್ ಗಳನ್ನ ಇಡಲು ಒಳಗೆ ವ್ಯವಸ್ಥೆಮಾಡಿದ್ದಾದರೂ, ಹೊರಗೆ ಇಟ್ಟಿರುವುದರಿಂದ ಗ್ರಾಹಕರಿಗೆ ಮೀನು ಮಾರುಕಟ್ಟೆ ಒಳಗೆ ಬರಲು ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಈ ಕೂಡಲೇ ನಗರಸಭೆ ಇಲ್ಲಿನ ಅವ್ಯವಸ್ಥೆಯನ್ನ ಸರಿಪಡಿಸಬೇಕು ಎಂದು ಎಂದು ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲುಂಬುಡ ಒತ್ತಾಯಿಸಿದ್ದಾರೆ. ಅಲ್ಲದೇ ಈಗಾಗ್ಲೇ ಮೀನಿನ ನೀರು ಮುಖ್ಯರಸ್ತೆಗೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಜನರಿಂದ ನಗರಸಭೆಗೆ ಹಿಡಿಶಾಪ ಆಗುವಂತ ಪರಿಸ್ಥಿಯೂ ನಿರ್ಮಾಣವಾಗಬಹುದು ಹೇಳಿದ್ರು.

Ad
Ad
Nk Channel Final 21 09 2023