ಪುತ್ತೂರು: ನಗರಸಭೆಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷತೆಗೆ ಚುನಾವಣೆ ಸೆ.3ರ ಮಂಗಳವಾರ ನಡೆಯಿತು.
ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲೀಲಾವತಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಕೆಮ್ಮಿಂಜೆ ಅವಿರೋಧವಾಗಿ ಆಯ್ಕೆಯಾದರು. 31 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 25, ಕಾಂಗ್ರೆಸ್ 5, ಎಸ್ ಡಿಪಿಐ 1 ಸ್ಥಾನವನ್ನು ಹೊಂದಿದೆ. ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಸನ್ಮಾನಿಸಿದರು.
ಇನ್ನು ಎಸ್.ಸಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಹುದ್ದೆಗೆ ಲೀಲಾವತಿಯವರನ್ನು ಆಯ್ಕೆ ಮಾಡಲಾಗಿತ್ತು. ಉಪಾಧ್ಯಕ್ಷ ಹುದ್ದೆಗೆ ಬಾಲಚಂದ್ರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಗೆ ಸುಂದರ ಪೂಜಾರಿ ಬಡಾವು ರನ್ನು ಆಯ್ಕೆ ಮಾಡಲಾಗಿತ್ತು.
Ad