ಪುತ್ತೂರು: ಪುತ್ತಿಲ ಪರಿವಾರ ಹಾಗೂ ವಿಶ್ವ ಹಿಂದೂ ಪರಿಷದ್ ನ ಕಾರ್ಯಕರ್ಯರ ನಡುವೆ ವಿಶ್ವ ಹಿಂದೂ ಪರಿಷದ್ ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ವೇಳೆ ಸ್ವಾಮೀಜಿ, ವಿಹಿಂಪ ರಾಷ್ಟೀಯ ನಾಯಕರ ಎದುರಲ್ಲೇ ಕಾರ್ಯಕರ್ತರು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಕಾರ್ಯಕ್ರಮ ನಡೆಯುತ್ತಿರುವಾಗ್ಲೇ ಪುತ್ತಿಲ ಪರಿವಾರ ಹಾಗೂ ವಿಎಚ್ ಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಭೂಮಿ ಪೂಜೆಗೆ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ್ದಕ್ಕೆ ವಿಎಚ್ ಪಿ ಕಾರ್ಯಕರ್ತರು ಕೆರಳಿದ್ದಾರೆ.
ಅರುಣ್ ಪುತ್ತಿಲ ಆಗಮಿಸಬಾರದು ಎಂದು ವಿಎಚ್ ಪಿ ಕಾರ್ಯಕರ್ತರು ತಡೆಯೊಡ್ಡಿದ್ದಾರೆ. ರಣಾಂಗಣವಾದ ವಿಎಚ್ ಪಿ ನೂತನ ಜಿಲ್ಲಾ ಕಾರ್ಯಲಯದ ಭೂಮಿ ಪೂಜೆ ನಡೆಯುತ್ತಿರುವ ವೇಳೆ ಈ ಘಟನೆ ನಡೆದಿದೆ.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಿದ್ದರು. ಈ ವೇಳೆ ಅರುಣ್ ಕುಮಾರ್ ಪುತ್ತಿಲ ಆಂಡ್ ಟೀಂ ಹಿಂದೂ ಸಂಘಟನೆಗಳಿಗೆ ಹಾಗೂ ಸಂಘ ಪರಿವಾರಕ್ಕೆ ನಿಂದಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಹಾಗಾಗಿ ಪುತ್ತಿಲ ಆಂಡ್ ಟೀಂ ಯವುದೇ ಕಾರಣಕ್ಕೂ ನಮ್ಮ ವಿಎಚ್ ಪಿ ಕಾರ್ಯಕ್ರಮಕ್ಕೆ ಬರಬಾರದು ಎಂದು ಪುತ್ತಿಲ ಪಕ್ಷೇತರನಾಗಿ ಸ್ಪರ್ಧಿಸಿದ್ದಾಗಲೇ ವಿಎಚ್ ಪಿ ಕಾರ್ಯಕರ್ತರು ಹೇಳಿದ್ದರು. ಇದಾದ ಬಳಿಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬಿಕ್ಕಟ್ಟು ಶಮನಗೊಂಡಿತ್ತು.
ಆದ್ರೆ ವಿಎಚ್ ಪಿ ನಡುವಿನ ಸಮರ ಹಾಗೆಯೇ ಉಳಿದಿತ್ತು. ಮತ್ತೆ ಇಂದು ವಿಎಚ್ ಪಿ ನೂತನ ಕಾರ್ಯಾಲಯದ ಕಾರ್ಯಕ್ರಮದಲ್ಲಿ ಸಮರ ಉಲ್ಭನಗೊಂಡಿದೆ. ಪುತ್ತಿಲ ಪರಿವಾರ ಹಾಗೂ ವಿಎಚ್ ಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.