ಮಂಗಳೂರು: ನಂತೂರು ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಕೂಳೂರು ಸೇತುವೆ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಪೂರ್ಣ ಪ್ರಮಾಣದ ದುರಸ್ಥಿಗೆ ಆಗ್ರಹಿಸಿದರು. ಪ್ರತಿಭಟನೆಗೆ ಪೊಲೀಸ್ ಇಲಾಖೆಯ ಅನುಮತಿ ನಿರಾಕರಣೆ ನಡುವೆಯೂ ಪ್ರೊಟೆಸ್ಟ್ ಮಾಡಲಾಯಿತು. ಮಂಗಳೂರು ಪೊಲೀಸ್ ಕಮಿಷನರ್ ಗೆ ಸವಾಲ್ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸದಂತೆ ಹೋರಾಟಗಾರರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿತ್ತು. ಟೋಲ್ ಗೇಟ್ ಹೋರಾಟ ಸಮಿತಿ ಮುಖಂಡ ಮುನೀರ್ ಕಾಟಿಪಳ್ಳ ಹೇಳಿಕೆ ನೀಡಿದ್ದು, ಹೆದ್ದಾರಿ ಅವ್ಯವಸ್ಥೆಯಿಂದ ಸಾಕಷ್ಟು ಪ್ರಾಣ ಹಾನಿ ಆಗಿದೆ. ನಂತೂರು ಫ್ಲೈ ಓವರ್ ಕಾಮಗಾರಿಯನ್ನ ನಿಗದಿತ ಕಾಲ ಮಿತಿಯಲ್ಲಿ ಮುಗಿಸಬೇಕು.
ಜನಪರ ಹೋರಾಟಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ.ಬಿಜೆಪಿ ಅಧಿಕಾರ ಅವಧಿಯಲ್ಲೂ ಇಷ್ಟು ದಬ್ಬಾಳಿಕೆ ನಡೆದಿರಲಿಲ್ಲ. ಪೊಲೀಸ್ ಇಲಾಖೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ಎನ್ನುತ್ತಾರೆ. ಮಂಗಳೂರಿನಲ್ಲಿ ಮಟ್ಕಾ ,ಜೂಜು ,ವೇಶ್ಯಾವಾಟಿಕೆ ,ಮಸಾಜ್ ಪಾರ್ಲರ್ ದಂಧೆ ಮಿತಿಮೀರಿದೆ ಎಂದರು.
ಮಿನಿ ವಿಧಾನ ಸೌಧದ ಎದುರೇ ಅಕ್ರಮ ದಂಧೆಗಳಿಗೆ ಅವಕಾಶ ನೀಡಲಿ. ಅಕ್ರಮ ದಂಧೆಗಳನ್ನ ನಡೆಸೋದಕ್ಕೆ ಟೆಂಟ್ ಹಾಕಿಕೊಡಲಿ. ಮುಂದಿನ ದಿನಗಳಲ್ಲಿ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ವಿರುದ್ಧ ಧರಣಿ ಮಾಡುತ್ತೇವೆ. ಕಮಿಷನರ್ ಹಟಾವೋ ಚಳುವಳಿಯನ್ನು ಹಮ್ಮಿಕೊಳ್ಳುತ್ತೇವೆ ಎಂದರು.